ನಾಪತ್ತೆಯಾದ ವಾಯುಸೇನೆ ವಿಮಾನಕ್ಕೆ ಮುಂದುವರೆದ ಶೋಧ ಕಾರ್ಯಾಚರಣೆ: ಸಚಿವ ಪರಿಕ್ಕರ್ ರಿಂದ ಪರಿಶೀಲನೆ

ಶೋಧ ಕಾರ್ಯಾಚರಣೆಯನ್ನು ಪರಿಶೀಲಿಸಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಾಂಬರಂ ವಾಯುನೆಲೆಗೆ ತೆರಳಿದ್ದಾರೆ.
ನಾಪತ್ತೆಯಾದ ವಾಯುಸೇನೆ ವಿಮಾನಕ್ಕೆ ಮುಂದುವರೆದ ಶೋಧ ಕಾರ್ಯಾಚರಣೆ: ಸಚಿವ ಪರಿಕ್ಕರ್ ಯಿಂದ ಪರಿಶೀಲನೆ
ನಾಪತ್ತೆಯಾದ ವಾಯುಸೇನೆ ವಿಮಾನಕ್ಕೆ ಮುಂದುವರೆದ ಶೋಧ ಕಾರ್ಯಾಚರಣೆ: ಸಚಿವ ಪರಿಕ್ಕರ್ ಯಿಂದ ಪರಿಶೀಲನೆ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿರುವ 4 ಮಂದಿ ಸಿಬ್ಬಂದಿ ಸೇರಿದಂತೆ ಸುಮಾರು 29 ಮಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಸೇನೆಯ ಎಎನ್-32 ವಿಮಾನದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಶೋಧ ಕಾರ್ಯಾಚರಣೆಯನ್ನು ಪರಿಶೀಲಿಸಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಾಂಬರಂ ವಾಯುನೆಲೆಗೆ ತೆರಳಿದ್ದಾರೆ.

ನಾಪತ್ತೆಯಾಗಿರುವ ವಿಮಾನಕ್ಕಾಗಿ ಭಾರತೀಯ ನೌಕಾ ಪಡೆ, ವಾಯು ಪಡೆ, ಕರಾವಳಿ ಭದ್ರತಾಪಡೆ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದು, ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಾವಳಿ ಭದ್ರತಾ ಪಡೆಯ ವಕ್ತಾರ, " ನಾಪತ್ತೆಯಾಗಿರುವ ವಿಮಾನವನ್ನು ಶನಿವಾರ ಬೆಳಿಗ್ಗೆ ವೇಳೆಗೆ ಪತ್ತೆ ಮಾಡುವ ವಿಶ್ವಾಸವಿತ್ತು. ಆದರೆ  ಒಡ್ಡೊಡ್ಡಾದ ಭೂಪ್ರದೇಶದಿಂದ ವಿಮಾನವನ್ನು ಪತ್ತೆ ಮಾಡುವ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ ಎಂದು ಹೇಳಿದ್ದಾರೆ.  ಶೋಧ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡುವುದಕ್ಕಾಗಿ 24x7 ಮಾಹಿತಿ ಕೇಂದ್ರವನ್ನು ಪ್ರಾರಂಭಿಸಿರುವ ಭಾರತೀಯ ಕರಾವಳಿ ಪಡೆ, ದಿನಾಂತ್ಯದ ವೇಳೆಗೆ ವಿಮಾನವನ್ನು ಪತ್ತೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ. ಕರಾವಳಿ ಕಾವಲು ಪಡೆಯೊಂದಿಗೆ ಎರಡು ಡ್ರೋನಿಯರ್ ಗಳು, ಭಾರತೀಯ ನೌಕಾ ಪಡೆ ನಾಲ್ಕು ನೌಕೆಗಳನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com