
ಮ್ಯೂನಿಚ್: ಜರ್ಮನಿಯ ಮ್ಯೂನಿಚ್ ನಗರದ ಮಾಲ್ ವೊಂದರ ಮೇಲೆ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಶಂಕಿತ ಉಗ್ರನ ದಾಳಿಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಗುಂಡಿನ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ತಮ್ಮ ಪ್ರಾರ್ಥನೆ ಮೃತಪಟ್ಟವರ ಕುಟುಂಬದವರೊಂದಿಗೆ ಇರಲಿದೆ ಎಂದು ಹೇಳಿದ್ದಾರೆ.
" ಮ್ಯೂನಿಚ್ ನಗರದ ಮಾಲ್ ನಲ್ಲಿ ನಡೆದಿರುವ ದಾಳಿ ನಮ್ಮನ್ನು ಭಯಗೊಳಿಸಿದೆ. ನಮ್ಮ ಪ್ರಾರ್ಥನೆ ಮೃತಪಟ್ಟವರ, ಗಾಯಗೊಂಡವರ ಕುಟುಂಬದವರೊಂದಿಗೆ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಸಿಟಿ ಒಲಿಂಪಿಕ್ ಪಾರ್ಕ್ ಗೆ ಸ್ಥಳೀಯ ಕಾಲಮಾನ ಸಂಜೆ 5.50 ಸುಮಾರಿಗೆ ನುಗ್ಗಿದ ಶಸ್ತ್ರಸಜ್ಜಿತ ಶಂಕಿತ ಉಗ್ರನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಇನ್ನು ಪೊಲೀಸರು ಸೇರಿ 21ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Advertisement