22 ನಾಯಿಗಳ ಮಾರಣಹೋಮ ಮಾಡಿ ಗುಂಡಿಗೆ ಎಸೆದ ದುಷ್ಕರ್ಮಿಗಳು

ಅಂಜನಾಪುರ ಹತ್ತಿರ ಅಮೃತಮಹಲ್ ನಲ್ಲಿ ಮೂರು ದಿನಗಳ ಹಿಂದೆ ಗುಂಡಿಯೊಂದರಲ್ಲಿ 22 ಸತ್ತ ನಾಯಿಗಳು...
ಸುಟ್ಟು ಹಾಕಲ್ಪಟ್ಟ ನಾಯಿಗಳನ್ನು ಅಂಜನಾದ್ರಿ ಲೇ ಔಟ್ ನಲ್ಲಿ ರಕ್ಷಿಸಿದ ಪ್ರಾಣಿದಯಾ ಸಂಘದ ಕಾರ್ಯಕರ್ತರು.
ಸುಟ್ಟು ಹಾಕಲ್ಪಟ್ಟ ನಾಯಿಗಳನ್ನು ಅಂಜನಾದ್ರಿ ಲೇ ಔಟ್ ನಲ್ಲಿ ರಕ್ಷಿಸಿದ ಪ್ರಾಣಿದಯಾ ಸಂಘದ ಕಾರ್ಯಕರ್ತರು.
ಬೆಂಗಳೂರು: ಅಂಜನಾಪುರ ಹತ್ತಿರ ಅಮೃತಮಹಲ್ ನಲ್ಲಿ ಮೂರು ದಿನಗಳ ಹಿಂದೆ ಗುಂಡಿಯೊಂದರಲ್ಲಿ 22 ಸತ್ತ ನಾಯಿಗಳು ಪತ್ತೆಯಾಗಿದ್ದವು. ಬೇರೆಲ್ಲಿಯೋ ನಾಯಿಗಳನ್ನು ಕೊಂದು ಇಲ್ಲಿ ಗುಂಡಿಯಲ್ಲಿ ಹೂತು ಹಾಕಿರಬೇಕು. ಸ್ಥಳೀಯರು ನಾಯಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲದಿರುವುದರಿಂದ ಕೊಂದವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಪೀಪಲ್ಸ್ ಫಾರ್ ಎನಿಮಲ್ಸ್(ಪಿಎಫ್ಎ) ಎಂಬ ಪ್ರಾಣಿದಯಾ ಸಂಘಟನೆಯ ಅಧಿಕಾರಿ ಶರತ್ ಲಾಲ್ ಅವರಿಗೆ ಮೊನ್ನೆ ಗುರುವಾರ ಒಂದು ದೂರವಾಣಿ ಕರೆ ಬಂತು. ಆಗ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಆಗ ಗುಂಡಿಯಲ್ಲಿ ಸುಮಾರು 30 ನಾಯಿಗಳನ್ನು ಹೂತಿರುವುದು ಪತ್ತೆಯಾಯಿತು. ಕೂಡಲೇ ಅವುಗಳನ್ನು ಹೊರತೆಗೆದು ಕೋರಮಂಗಲದಲ್ಲಿರುವ ಕಾರ್ಟ್ ಮನ್ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿದರು. ಉಳಿದ ನಾಯಿಗಳು ಸತ್ತು ಹೋಗಿದ್ದವು ಎನ್ನುತ್ತಾರೆ ಶರತ್ ಲಾಲ್.
ನಾಯಿಗಳು ಆರೋಗ್ಯವಂತವಾಗಿ ಕಂಡುಬರುತ್ತಿದ್ದು, ಸಾವಿಗೆ ನಿಖರ ಕಾರಣವೇನೆಂದು ತಿಳಿದುಬರುತ್ತಿಲ್ಲ ಎನ್ನುತ್ತಾರೆ ಶರತ್.ಈ ಸಂಬಂಧ ಎಫ್ ಐಆರ್ ದಾಖಲಿಸಿದ್ದೇವೆ ಎನ್ನುತ್ತಾರೆ ದಕ್ಷಿಣ ವಲಯ ಡಿಸಿಪಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com