ಕೃಷ್ಣಮೃಗ, ಚಿಂಕಾರ ಬೇಟೆ ಪ್ರಕರಣದಲ್ಲಿ ಸಲ್ಮಾನ್ ದೋಷಮುಕ್ತ; ರಾಜಸ್ತಾನ ಹೈಕೋರ್ಟ್ ತೀರ್ಪು

ಕೃಷ್ಣಮೃಗ ಮತ್ತು ಚಿಂಕಾರ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ವಿರುದ್ಧದ ಕೇಸನ್ನು ಖುಲಾಸೆಗೊಳಿಸಿ...
ಸಲ್ಮಾನ್ ಖಾನ್(ಸಂಗ್ರಹ ಚಿತ್ರ)
ಸಲ್ಮಾನ್ ಖಾನ್(ಸಂಗ್ರಹ ಚಿತ್ರ)
ಜೈಪುರ: ಕೃಷ್ಣಮೃಗ ಮತ್ತು ಚಿಂಕಾರ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ವಿರುದ್ಧದ ಕೇಸನ್ನು ಖುಲಾಸೆಗೊಳಿಸಿ ರಾಜಸ್ತಾನ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
1998ರ ಸೆಪ್ಟೆಂಬರ್ 26 ಮತ್ತು 28ರಂದು ಸಲ್ಮಾನ್ ಖಾನ್ ರಾಜಸ್ತಾನದ ಜೋಧ್ ಪುರ ಹೊರವಲಯದಲ್ಲಿ ಹಮ್ ಸಾತ್ ಸಾತ್ ಹೈನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಕೃಷ್ಣಮೃಗ ಮತ್ತು ಚಿಂಕಾರವನ್ನು ಬೇಟೆಯಾಡಿದ್ದಕ್ಕಾಗಿ ಸಲ್ಮಾನ್ ಖಾನ್ ಮತ್ತು ಇತರ ಏಳು ಮಂದಿ ವಿರುದ್ಧ ಜೋಧ್ ಪುರ ಸ್ಥಳೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು. 
ವಿಚಾರಣೆ ನಡೆಸಿದ ನ್ಯಾಯಾಲಯ ಐದು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿತ್ತು. 
ತೀರ್ಪಿನ ವಿರುದ್ಧ ಸಲ್ಮಾನ್ ಖಾನ್ ರಾಜಸ್ತಾನ ಹೈಕೋರ್ಟ್ ಗೆ ಮೊರೆ ಹೋಗಿದ್ದರು. 
ಇಂದು ತೀರ್ಪು ನೀಡಿದ ಹೈಕೋರ್ಟ್ ಸಲ್ಮಾನ್ ಖಾನ್ ನನ್ನು ದೋಷಮುಕ್ತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com