ಮಹಾತ್ಮಗಾಂಧಿ ಹತ್ಯೆ ಸಂಬಂಧ ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿ: ಸುಬ್ರಮಣಿಯನ್ ಸ್ವಾಮಿ ಆಗ್ರಹ

ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಸಂಬಂಧ ರಾಜ್ಯಸಭೆಯಲ್ಲಿ ಚರ್ಚೆ ನಡೆಯಬೇಕೆಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Updated on

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಸಂಬಂಧ ರಾಜ್ಯಸಭೆಯಲ್ಲಿ ಚರ್ಚೆ ನಡೆಯಬೇಕೆಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿತು. ಮಹಾತ್ಮ ಗಾಂಧಿ ಅವರ ದೇಹದ ಮರಣೋತ್ತರ ಪರೀಶ್ರೆ ನಡೆದಿಲ್ಲ, ಈ ಸಂಬಂಧ ಸಂಸದರು ರಾಜ್ಯಸಭೆಯಲ್ಲಿ ಚರ್ಚಿಸಬೇಕು, ಇಲ್ಲದಿದ್ದರೇ ಸುಪ್ರಿಂಕೋರ್ಟ್ ಮೆಟ್ಟಿಲೇರುವುದಾಗಿ ಅವರು  ತಿಳಿಸಿದರು.

ಇತ್ತೀಚೆಗೆ ನರೇಂದ್ರ ಮೋದಿ ಅವರ ಸರ್ಕಾರ ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದ ಹಲವು ಕಡತಗಳನ್ನು ನ್ಯಾಷನಲ್ ಆರ್ಕೈವ್ ನಲ್ಲಿ ಇಟ್ಟಿದೆ. ನನಗೆ ಅಲ್ಲಿಗೆ ಹೋಗುವ ಅವಕಾಶ ಸಿಕ್ಕಿತ್ತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಮಹಾತ್ಮ ಗಾಂಧಿಅವರನ್ನು ಕೊಂದಿದ್ದು ಆರ್ ಎಸ್ ಎಸ್ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ಛೀಮಾರಿ ಹಾಕಿದ್ದ ಸುಪ್ರಿಂ ಕೋರ್ಟ್ ವಿಚಾರಣೆ ಎದುರಿಸಿ ಇಲ್ಲವೇ ಕ್ಷಮೆ ಕೋರಿ ಎಂದು ಸೂಚಿಸಿತ್ತು.

ನಾನು ಮಹಾತ್ಮ ಗಾಂಧಿ ಅವರ ಹೆಸರನ್ನು ಮಾತ್ರ ತೆಗೆದುಕೊಂಡೆ, ಬೇರೆ ಯಾವ ಗಾಂಧಿಯ ಹೆಸರನ್ನು ಉಲ್ಲೇಖಿಸಲಿಲ್ಲ. ಆದರೆ ಕಾಂಗ್ರೆಸ್ ನ ಎಲ್ಲಾ ಸಂಸದರು ಪ್ರತಿಭಟನೆ ನಡೆಸಿದರು ಎಂದು ಸ್ವಾಮಿ ವಿವರಿಸಿದರು.

1948ರ ಜನವರಿ 30 ರಂದು ಮಹಾತ್ಮ ಗಾಂಧಿ ಹತ್ಯೆಯಾಯಿತು. ಈ ಸಂಬಂಧ ನಾಥೂರಾಮ್ ಗೂಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಲಾಯಿತು.

ನಾಥೂರಾಮ್ ಗೂಡ್ಸೆ  ಆರ್ ಎಸ್ ಎಸ್ ಕಾರ್ಯಕರ್ತ ಎಂಬುದನ್ನು ದಶಕಗಳು ಕಳೆದರೂ ನಿರಾಕರಿಸುತ್ತಾ ಬಂದಿದೆ. ಮಹಾತ್ಮ ಗಾಂಧಿ ದೇಹ ಮರಣೋತ್ತರ ಪರೀಕ್ಷೆಗೆ ಒಳಗಾಗಿರಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಹತ್ಯೆ ಸಂಬಂಧ ಇನ್ನೂ ಕೆಲವೊಂದು ಗೊಂದಲಗಳಿವೆ. ನಾಲ್ಕು ಗುಂಡುಗಳು ಮಹಾತ್ಮ ಗಾಂಧಿ ಅವರ ದೇಹ ಹೊಕ್ಕಿದ್ದವು ಎಂದು ವೃತ್ತ ಪತ್ರಿಕೆ ವರದಿ ಮಾಡಿತ್ತು, ಆದರೆ ವಿಚಾರಣೆ ವೇಳೆ 3 ಗುಂಡುಗಳು ಎಂದು ವಾದಿಸಲಾಗಿತ್ತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com