ಕುರಾನ್ ಅಪವಿತ್ರಗೊಳಿಸಿದ ಪ್ರಕರಣ: ಆಪ್ ಶಾಸಕನಿಗೆ ನ್ಯಾಯಾಂಗ ಬಂಧನ

ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಕುರಾನ್ ನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್ ಗೆ ಆಗಸ್ಟ್ 1 ರವರೆಗೆ ಪಂಜಾಬ್ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್
ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್

ಚಂಡೀಗಢ: ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಕುರಾನ್ ನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್ ಗೆ ಆಗಸ್ಟ್ 1 ರವರೆಗೆ ಪಂಜಾಬ್ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಭಾನುವಾರ ಬಂಧಿಸಲಾಗಿದ್ದ ನರೇಶ್ ಯಾದವ್ ನ್ನು ಚಂಡೀಗಢದ ಬಳಿ ಇರುವ ಮಲೇರ್ಕೋಟ್ಲಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸೋಮವಾರದಂದು ಪೊಲಿಸ್ ಕಷ್ಟಗಿಗೆ ಆದೇಶಿಸಿದ್ದ ನ್ಯಾಯಾಲಯ ಜು.27 ರಂದು ನರೇಶ್ ಯಾದವ್ ನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಜೂ.24 ರಂದು ಕುರಾನ್ ನ್ನು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಪೊಲೀಸರು ಮೆಹ್ರೌಲಿ ಕ್ಷೇತ್ರದ ಶಾಸಕ ನರೇಶ್ ಯಾದವ್ ನನ್ನ ಬಂಧಿಸಿದ್ದರು. ಇದೆ ಪ್ರಕರಣದ ಕುರಿತು ಪೊಲೀಸರು ಆಮ್ ಆದ್ಮಿ ಪಕ್ಷದ ಶಾಸಕನನ್ನು ಜು.9 ರಂದು ಸತತ 8 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿರುವ ಪ್ರಮುಖ ಆರೋಪಿ ವಿಜಯ್‌ ಕುಮಾರ್‌ ಎಂಬಾತ ವಿಚಾರಣೆ ವೇಳೆ ನರೇಶ್‌ ಯಾದವ್‌ ಅವರ ಆಣತಿಯಂತೆ ನಾನು ಗ್ರಂಥವನ್ನು ಹರಿದಿದ್ದೆ ಎಂದು ಮಾಹಿತಿ ನೀಡಿರುವ ಕಾರಣ ಆಮ್ ಆದ್ಮಿ ಪಕ್ಷದ ಶಾಸಕನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com