ಅಭ್ಯಾಸದಲ್ಲಿ ಬಾಲಕಿಯರೇ ಮುಂದು, ಆದರೆ ಪದವಿ ನಂತರ ಶೇ.84ರಷ್ಟು ಡ್ರಾಪ್ ಔಟ್

ಪ್ರತಿ ವರ್ಷ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಸಿಇಟಿ ಫಲಿತಾಂಶ ಪ್ರಕಟಗೊಂಡಾಗ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪ್ರತಿ ವರ್ಷ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಸಿಇಟಿ ಫಲಿತಾಂಶ ಪ್ರಕಟಗೊಂಡಾಗ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳುವುದು ಸಾಮಾನ್ಯವಾಗಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಉತ್ತಮ ಅಭ್ಯಾಸ ಮಾಡುವ ಬಾಲಕಿಯರು ಉನ್ನತ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ತೊರದಿರುವುದು ಅಚ್ಚರಿ ಮೂಡಿಸಿದ್ದು, ಇದಕ್ಕೆ ಮದುವೆ ಅಥವಾ ನೌಕರಿ ಹುಡುಕದಿರುವುದು ಕಾರಣ ಎಂದು ಇಂಡಿಯಾಸ್ಪೆಂಡ್ ಸಂಶೋಧನೆ ಹೇಳಿದೆ.
2007ರಿಂದ 2014ರವರೆಗೆ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಸಂಖ್ಯೆ ಶೇ.39ರಿಂದ 46ಕ್ಕೆ ಹೆಚ್ಚಳವಾಗಿದೆ. ಆದರೆ ನೌಕರಿ ಹಿಡಿಯುತ್ತಿರುವವರ ಸಂಖ್ಯೆ 2014ರಲ್ಲಿ ಶೇ,27ಕ್ಕೆ ಕುಸಿದಿದೆ. ಇದು 1999ರಲ್ಲಿ ಶೇ,34ರಷ್ಟು ಇತ್ತು ಎಂದು 2015ರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಪ್) ವರದಿ ತಿಳಿಸಿದೆ.
ಸುಮಾರು 12 ದಶಲಕ್ಷ ಮಹಿಳೆಯರು ಪದವಿಪೂರ್ವ ಶಿಕ್ಷಣ ಪಡೆದರೆ, ಆ ಪೈಕಿ ಕೆಲವು ಮಹಿಳೆಯರು ಮಾತ್ರ ವೃತ್ತಿಪಕ್ಷ ಶಿಕ್ಷಣವನ್ನು ಮುಂದುವರೆಸುತ್ತಿದ್ದಾರೆ. 2013ರಲ್ಲಿ ಒಟ್ಟು 6 ಲಕ್ಷ ಬಾಲಕಿಯರು ಡಿಪ್ಲೋ ಕೋರ್ಸ್ ಗಳಿಗೆ ಸೇರಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ ಶೇ,40ರಷ್ಟು ಮಹಿಳೆಯರು ಮಾತ್ರ ಪಿಎಚ್ ಡಿಗೆ ಸೇರುತ್ತಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.
ಕಳೆದ ಏಳು ವರ್ಷಗಳಿಂದ ಸತತವಾಗಿ ರಾಷ್ಟ್ರೀಯ ಶಿಕ್ಷಣ ಮಂಡಳಿಯ 10ನೇ ತರಗತಿಯ ಪರೀಕ್ಷೆಯಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಪದವಿ ಶಿಕ್ಷಣದ ನಂತರ ಶೇ,84ರಷ್ಟು ಬಾಲಕಿಯರು ಡ್ರಾಪ್ ಔಟ್ ಆಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com