ಮೊಬೈಲ್ ನಲ್ಲೆ ಪತಿಗೆ ತಲಾಕ್ ಹೇಳಿದ ದಿಟ್ಟ ಮಹಿಳೆ
ಮೂರು ಬಾರಿ ತಲಾಕ್ ಹೇಳುವ ಮೂಲಕ ಪತ್ನಿಗೆ ವಿಚ್ಛೇಧನ ನೀಡುವ ಹಕ್ಕು ಮುಸ್ಲಿಂ ಪುರುಷರಿಗಿದೆ. ಆದರೆ ಇಲ್ಲಿ 19 ವರ್ಷದ ಯುವತಿಯೊಬ್ಬಳು ಮದುವೆಯಾದ ಮಾರನೇ ದಿನವೇ ಫೋನ್ ಮೂಲಕ ತಲಾಕ್ ಹೇಳಿ ಸಂಬಂಧವನ್ನು ಕಡಿದುಕೊಂಡಿದ್ದಾಳೆ.
ಉತ್ತರಪ್ರದೇಶದ ಭಗವಾನ್ ಪುರ್ ಮೂಲದ ಮೊಹಸೀನಾ ಮೊಹಮ್ಮದ್ ಆರೀಫ್ ಎಂಬಾತನನ್ನು ವಿವಾಹವಾಗಿದೆ. ಸಮ್ಮಿಲನದೊಂದಿಗೆ ಕಳೆಯಬೇಕಿದ್ದ ಮೊದಲ ರಾತ್ರಿ ಪತಿ ವರದಕ್ಷಿಣೆಗೆ ಪೀಡಿಸಿದ್ದಾನೆ. ಇದರಿಂದ ಮೊಹಸೀನಾ ಕೂಡಲೇ ತಾಯಿಗೆ ಕರೆ ಮಾಡಿ ಪತಿ ವರದಕ್ಷಿಣೆ ಕೇಳುತ್ತಿರುವ ಬಗ್ಗೆ ಹೇಳಿದ್ದಾಳೆ. ತಾಯಿ ಕೂಡಲೇ ನೀನು ಮನೆಗೆ ಬಂದು ಬಿಡು ಎಂದು ಹೇಳಿದ್ದಾಳೆ. ಈ ವೇಳೆ ಗ್ರಾಮದ ಕೆಲವರು ಗಂಡನ ಮನೆಯಲ್ಲಿದ್ದ ಮೊಹಸೀನಾಳನ್ನು ಕರೆದುಕೊಂಡು ಬಂದಿದ್ದಾರೆ.
ಮೊಹಸೀನಾ ತನ್ನ ಗಂಡನಿಗೆ ತಲಾಕ್ ಹೇಳಿದ ನಂತರ ಸುಮ್ಮನಿರದ ಗ್ರಾಮ ಪಂಚಾಯತ್ ಇಬ್ಬರ ನಡುವೆ ಸಂಧಾನ ನಡೆಸಲು ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ ಇದಕ್ಕೆ ಸೋಪು ಹಾಕ ಮೊಹಸೀನಾ ತನ್ನ ನಿರ್ಧಾರ ಸರಿ ಇದೆ ಎಂದು ಹೇಳಿ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದಾಳೆ.
ಖಾಪ್ ಪಂಚಾಯತ್ ಹೆಣ್ಣಿನಿಂದ ವರದಕ್ಷಿಣೆ ಪಡೆಯುವುದು ಅಪರಾಧ ಆದೇಶ ನೀಡಿದ್ದು. ಮೊಹಿಸೀನಾ ಪತಿ ಮೊಹಮ್ಮದ್ ಆರೀಫ್ ಗೆ 2 ಲಕ್ಷ ರುಪಾಯಿಯನ್ನು ಮೊಹಿಸೀನಾ ತಾಯಿಗೆ ನೀಡುವಂತೆ ಸೂಚಿಸಿದ್ದಾರೆ. ಇನ್ನು ಮೊಹಸೀನಾಳ ಮಾವ ಮೊಹಮ್ಮದ್ ಸತ್ತಾರ್ ಮೇಲೆ 3 ತಿಂಗಳ ಕಾಲ ಯಾವುದೇ ಮದುವೆಯಲ್ಲಿ ಭಾಗವಹಿಸದಂತೆ ನಿಷೇಧಾಜ್ಞೆ ಹೇರಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ