ಜಿಎಸ್ ಟಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ; ಶೇಕಡಾ 1ರಷ್ಟು ಮೇಲ್ತೆರಿಗೆ ಕೈಬಿಟ್ಟ ಸರ್ಕಾರ

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಮುನ್ನ ಅದಕ್ಕೆ ಪ್ರಮುಖ ಬದಲಾವಣೆ ತರಲು ಕೇಂದ್ರ ಸಂಪುಟ ನಿನ್ನೆ ಒಪ್ಪಿಗೆ ನೀಡಿದೆ.
ಶೇಕಡಾ 1ರಷ್ಟು ಉತ್ಪಾದನೆ ತೆರಿಗೆಯನ್ನು ತೆಗೆದುಹಾಕಿರುವುದಲ್ಲದೆ ಮತ್ತು ರಾಜ್ಯಗಳಿಗೆ ಮೊದಲ 5 ವರ್ಷಗಳಲ್ಲಿ ಯಾವುದೇ ಆದಾಯದಲ್ಲಿ ನಷ್ಟವುಂಟಾದರೆ ಅದಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡುವುದೆಂದು ನಿನ್ನೆ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಎಸ್ ಟಿ ಮಸೂದೆಯನ್ನು ಈ ವಾರ ಸಂಸತ್ತಿನಲ್ಲಿ ಚರ್ಚೆಗೆ ತೆಗೆದುಕೊಂಡು ಅನುಮೋದನೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಸರ್ಕಾರ ಇದ್ದರೂ ಕೂಡ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಮುಂಗಾರು ಅಧಿವೇಶದಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಮುಂದಿನ ವರ್ಷ ಏಪ್ರಿಲ್ ನಿಂದ ಜಾರಿಗೆ ತರುವ ನಿರೀಕ್ಷೆಯಲ್ಲಿದೆ ಸರ್ಕಾರ.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ವಿರೋಧ ಪಕ್ಷಗಳ ಬೆಂಬಲ ಅತೀ ಅಗತ್ಯವಾಗಿದೆ. ರಾಜ್ಯಗಳಿಗೆ ಏನಾದರೂ ನಷ್ಟವುಂಟಾದಲ್ಲಿ ಮೊದಲ 5 ವರ್ಷ ಪರಿಹಾರ ನೀಡುವುದಾಗಿ ಮತ್ತು ವಿಧಿಸಲಾಗಿದ್ದ ಶೇಕಡಾ 1ರಷ್ಟು ಅಂತಾರಾಜ್ಯ ತೆರಿಗೆಯನ್ನು ಕೂಡ ಕೇಂದ್ರ ಸರ್ಕರ ಕೈಬಿಟ್ಟಿದೆ. ವಿರೋಧ ಪಕ್ಷ ಪ್ರಮುಖ ಮೂರು ಬೇಡಿಕೆಗಳನ್ನಿಟ್ಟುಕೊಂಡು ರಾಜ್ಯಸಭೆಯಲ್ಲಿ ಮಸೂದೆಗೆ ಅನುಮೋದನೆ ನೀಡಿರಲಿಲ್ಲ. 
ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ಕುರಿತು ಮಸೂದೆಯಲ್ಲಿ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಿತು. 
ಕಳೆದ ವರ್ಷ ಆಗಸ್ಟ್ ನಲ್ಲಿ ಲೋಕಸಭೆಯಲ್ಲಿ ಒಪ್ಪಿಗೆ ಪಡೆದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕಿದ ನಂತರ ಮತ್ತೆ ಲೋಕಸಭೆಗೆ ಅನುಮೋದನೆಗೆ ಹೋಗಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com