ಭಾರತ- ಬಾಂಗ್ಲಾ ಹೊಸ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ

ಭಾರತ- ಬಾಂಗ್ಲಾ ದೇಶದ ನಡುವೆ ಹೊಸ ರೈಲು ಮಾರ್ಗ ಅಂತಿಮಗೊಂಡ ಆರು ವರ್ಷಗಳ ನಂತರ ಜು.31 ರಂದು ಶಂಕುಸ್ಥಾಪನೆ ನೆರವೇರಿದೆ.
ಭಾರತ- ಬಾಂಗ್ಲಾ ಹೊಸ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ
ಭಾರತ- ಬಾಂಗ್ಲಾ ಹೊಸ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ

ಅಗರ್ತಲಾ: ಸುಮಾರು 968 ಕೋಟಿ ರೂ ವೆಚ್ಚದ ಯೋಜನೆಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಬಾಂಗ್ಲಾ ರೈಲ್ವೆ ಸಚಿವ ಮೈಜ್ಬುಲ್ ಹಕ್ ಅಗರ್ತಲಾ( ಭಾರತ) ಅಖೌರ( ಬಾಂಗ್ಲಾದೇಶ) ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಸುಮಾರು 968 ಕೋಟಿ ಮೊತ್ತದ ಅಗರ್ತಲಾ- ಅಖೌರ ರೈಲು ಯೋಜನೆ ಒಪ್ಪಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್- ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಭೇಟಿಯ ವೇಳೆ ಅಂತಿಮವಾಗಿತ್ತು. ಅಗರ್ತಲಾ-ಅಖೌರ ನಡುವಿನ ರೈಲು ಯೋಜನೆಯಿಂದ ಉಭಯ ದೇಶಗಳ ಸಂಬಂಧ ಸುಧಾರಿಸುವುದು ಮಾತ್ರವಲ್ಲದೆ, ಕೋಲ್ಕತ್ತದಿಂದ ತ್ರಿಪುರಕ್ಕೆ ಬಾಂಗ್ಲಾದೇಶ ಮಾರ್ಗವಾಗಿ ಸಂಪರ್ಕ ಕಲ್ಪಿಸಿದರೆ ಈಶಾನ್ಯ ರಾಜ್ಯಗಳ ಪ್ರದೇಶಗಳಿಗೆ ದೂರ ಮತ್ತು ಪ್ರಯಾಣದ ಅವಧಿ ಕಡಿಮೆ ಆಗುತ್ತದೆ. 2012-13 ನೇ ಸಾಲಿನ ರೈಲ್ವೆ ಬಜೆಟ್ ನಲ್ಲಿ ಭಾರತ- ಬಾಂಗ್ಲಾದೇಶದ ನಡುವಿನ ರೈಲ್ವೆ ಯೋಜನೆಯನ್ನು ಘೋಷಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com