ಸೌದಿಯಲ್ಲಿ ಹಸಿವಿನಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ 800 ಅಲ್ಲ, 10 ಸಾವಿರ!: ಸುಷ್ಮಾ ಸ್ವರಾಜ್

ಸೌದಿ ಅರೇಬಿಯಾದಲ್ಲಿ ನೌಕರಿ ಕಳೆದುಕೊಂಡು ಹಸಿವಿನಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ 800 ಅಲ್ಲ, 10 ಸಾವಿರ ಎಂಬ ಆತಂಕಕಾರಿ ಮಾಹಿತಿಯನ್ನು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನವದೆಹಲಿ: ಸೌದಿ ಅರೇಬಿಯಾದಲ್ಲಿ ನೌಕರಿ ಕಳೆದುಕೊಂಡು ಹಸಿವಿನಿಂದ ಬಳಲುತ್ತಿರುವ  ಭಾರತೀಯರ ಸಂಖ್ಯೆ 800 ಅಲ್ಲ, 10 ಸಾವಿರ ಎಂಬ ಆತಂಕಕಾರಿ ಮಾಹಿತಿಯನ್ನು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಸೌದಿಯಲ್ಲಿರುವ ಭಾರತೀಯರಿಗೆ ಬೇರೆ ರೀತಿಯ ನೆರವು ನೀಡುವುದರ ಜೊತೆಗೆ ಆಹಾರವನ್ನು ಪೂರೈಕೆ ಮಾಡುವಂತೆ ಗಲ್ಫ್ ನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಗಲ್ಫ್ ನಲ್ಲಿ ಸಮಸ್ಯೆ ಎದುರಿಸುತ್ತಿರುವ ಭಾರತೀಯ ಸಹೋದರರಿಗೆ ಸಹಾಯ ಮಾಡುವಂತೆ ಸುಷ್ಮಾ ಸ್ವರಾಜ್ ಸುಮಾರು 30 ಲಕ್ಷ ಕ್ಕೂ ಹೆಚ್ಚು ಭಾರತೀಯರಿಗೆ ಕರೆ ನೀಡಿದ್ದು, ಭಾರತೀಯರ ಒಗ್ಗಟಿಗಿಂತ ಶಕ್ತಿಯುತವಾದದ್ದು ಮತ್ತೊಂದಿಲ್ಲ ಎಂದು ಟ್ವೀಟ್  ನಲ್ಲಿ ಹೇಳಿದ್ದಾರೆ.  
 
ಕಳೆದ ಮೂರು ವರ್ಷಗಳಿಂದ ಸೌದಿಯಲ್ಲಿರುವ 800 ಕ್ಕೂ ಹೆಚ್ಚು ಭಾರತೀಯರು ಆಹಾರವಿಲ್ಲದೆ ಪರದಾಡುತ್ತಿದ್ದಾರೆ, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಎಂದು ಟ್ವೀಟ್ ಮಾಡಿದ ಬಳಿಕ ಸುಷ್ಮಾ ಸ್ವರಾಜ್ ಸೌದಿಯಲ್ಲಿರುವ ಭಾರತೀಯರಿಗೆ ಸಹಾಯ ಮಾಡಲು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಹೆಚ್ಚು ಮಾಹಿತಿ ಪಡೆದಿರುವ ಸಚಿವೆ ಸುಷ್ಮಾ ಸ್ವರಾಜ್ ಸೌದಿಯಲ್ಲಿ ಆಹಾರಕ್ಕಾಗಿ ಪರದಾಡುತ್ತಿರುವ ಭಾರತೀಯರ ಸಂಖ್ಯೆ 800 ಅಲ್ಲ 10 ಸಾವಿರ ಎಂದು ತಿಳಿಸಿದ್ದಾರೆ.

ವಿದೇಶಾಂಗ ಇಲಾಖೆ ರಾಜ್ಯ ಸಚಿವರಾಗಿರುವ ಎಂಜೆ ಅಕ್ಬರ್ ಭಾರತೀಯರ ಪರಿಸ್ಥಿತಿ ಕುರಿತು ಸೌದಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಹಾಗೂ ವಿಕೆ ಸಿಂಗ್ ಸೌದಿ ಅರೇಬಿಯಾಗೆ ಭೇಟಿ ನೀಡಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com