

ನವದೆಹಲಿ: ಈ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪಾಕಿಸ್ತಾನಕ್ಕೆ ಪ್ರವೇಶ ನಿರಾಕರಿಸಬೇಕು ಎಂದು ಜೆಯುಡಿ ಉಗ್ರ ಸಂಘಟನೆ ಮುಖಂಡ ಹಫೀಜ್ ಸಯೀದ್ ಪಾಕ್ ಸರ್ಕಾರವನ್ನು ಒತ್ತಾಯಿಸಿದ್ದಾನೆ.
ಇಂಡಿಯಾ ಟುಡೆ ವರದಿ ಪ್ರಕಾರ ಕಾಶ್ಮೀರಕ್ಕೆ ಭಾರತ ಸ್ವಾತಂತ್ರ್ಯ ನೀಡುವವರೆಗೆ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಗೆ ಪಾಕಿಸ್ತಾನಕ್ಕೆ ಪ್ರವೇಶವನ್ನು ನಿರಾಕರಿಸಬೇಕು ಎಂದು ಹಫೀಜ್ ಸಯೀದ್ ನವಾಜ್ ಷರೀಫ್ ಅವರನ್ನು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.
ಆಗಸ್ಟ್ 3 ರಂದು ಇಸ್ಲಾಮಾಬಾದ್ ನಲ್ಲಿ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರುಗಳ ಸಮ್ಮೇಳನ ನಡೆಯಲಿದ್ದು, ಗೃಹ ಸಚಿವ ರಾಜನಾಥ್ ಸಿಂಗ್ ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪಠಾಣ್ ಕೋಟ್ ದಾಳಿಯ ನಂತರ ಮೊದಲ ಬಾರಿಗೆ ಭಾರತದ ಹಿರಿಯ ನಾಯಕರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಕಾಶ್ಮೀರದಲ್ಲಿ ಬುರ್ಹಾನ್ ವನಿಯ ಎನ್ ಕೌಂಟರ್ ಘಟನೆ ನಡೆದ ಬಳಿಕ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.