ಜಾಕಿರ್ ನಾಯಕ್ ಗೆ ಮತ್ತಷ್ಟು ಸಂಕಷ್ಟ: 55 ಶಂಕಿತ ಉಗ್ರರಿಗೆ ಸ್ಫೂರ್ತಿಯಾಗಿರುವ ಶಂಕೆ

ಇಸ್ಲಾಮ್ ನ ವಿವಾದಾತ್ಮಕ ಧಾರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, 55 ಶಂಕಿತ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿರುವ ಬಗ್ಗೆ ವರದಿ ಪ್ರಕಟವಾಗಿದೆ.
ಜಾಕಿರ್ ನಾಯಕ್
ಜಾಕಿರ್ ನಾಯಕ್

ನವದೆಹಲಿ: ಇಸ್ಲಾಮ್ ನ ವಿವಾದಾತ್ಮಕ ಧಾರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, 55 ಶಂಕಿತ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿರುವ ಬಗ್ಗೆ ವರದಿ ಪ್ರಕಟವಾಗಿದೆ.

ಕಳೆದ ಒಂದು ದಶಕದಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ಬಂಧನಕ್ಕೊಳಗಾಗಿರುವ 55 ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿರುವ ಬಗ್ಗೆ ಭದ್ರತಾ ಸಂಸ್ಥೆಗಳು ವರದಿ ಸಿದ್ಧಪಡಿಸಿದ್ದು, ಜಾಕಿರ್ ನಾಯಕ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಕೋಮುದ್ವೇಷವನ್ನು ಉತ್ತೇಜಿಸಿರುವ ಆರೋಪದಡಿ ಜಾಕಿರ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಭದ್ರತಾ ಸಂಸ್ಥೆಗಳು ಚಿಂತನೆ ನಡೆಸುತ್ತಿದ್ದು 2005 ರಿಂದ ಈ ವರೆಗೆ ನಡೆದಿರುವ ಭಯೋತ್ಪಾದಕ ದಾಳಿಗಳ ಆರೋಪಿಗಳ ಪಟ್ಟಿಯಲ್ಲಿ ಜಾಕಿರ್ ನಾಯಕ್ ನಿಂದ ಸ್ಫೂರ್ತಿ ಪಡೆದವರ ಹೆಸರೂ ಇದೆ. ಈ ಪೈಕಿ ಹೆಚ್ಚಿನವರು ಸಿಮಿ ಉಗ್ರ ಸಂಘಟನೆ, ಲಷ್ಕರ್-ಎ-ತಯ್ಬಾ, ಇಂಡಿಯನ್ ಮುಜಾಹಿದ್ದೀನ್ ಹಾಗು ಇಸೀಸ್ ಉಗ್ರ ಸಂಘಟನೆಯ ಶಂಕಿತ ಉಗ್ರರಿದ್ದಾರೆ. ಇನ್ನು ಜಾಕಿರ್ ನಾಯಕ್ ವಿರುದ್ಧ ಈ ಹಿಂದೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನೂ ಭದ್ರತಾ ಸಂಸ್ಥೆಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಜಾಕಿರ್ ನಾಯಕ್ ಮೇಲೆ ಗುಪ್ತಚರ ಇಲಾಖೆ ನಿಗಾ ಇಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com