ಬಾಲಕರ ಶಾಲೆಯಲ್ಲಿ ಬಾಲಕಿಯರಿಗೆ ಪ್ರವೇಶ: ಶಿಕ್ಷಣ ಇಲಾಖೆ ಕೆಂಗಣ್ಣು

ಸಮಾಜದಲ್ಲಿ ಅನೇಕ ಮಂದಿ ಇತ್ತೀಚಿನ ದಿನಗಳಲ್ಲಿ ಲಿಂಗ ಸಮಾನತೆಗಾಗಿ ಹೋರಾಟ ನಡೆಸುತ್ತಿದ್ದರೂ ಕೂಡ ಕೋಝಿಕ್ಕೋಡ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಝಿಕ್ಕೋಡ್: ಸಮಾಜದಲ್ಲಿ ಅನೇಕ ಮಂದಿ ಇತ್ತೀಚಿನ ದಿನಗಳಲ್ಲಿ ಲಿಂಗ ಸಮಾನತೆಗಾಗಿ ಹೋರಾಟ ನಡೆಸುತ್ತಿದ್ದರೂ ಕೂಡ ಕೋಝಿಕ್ಕೋಡ್ ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಬಾಲಕರ ಮಾದರಿ ಪ್ರೌಢಶಾಲೆಯ ನಡುವೆ ಹೋರಾಟ ಮುಂದುವರಿದಿದೆ. ಅದಕ್ಕೆ ಕಾರಣ ಶಾಲೆಯಲ್ಲಿ ಬಾಲಕಿಯರಿಗೆ ಪ್ರವೇಶಾವಕಾಶ ನೀಡಲು ಮುಂದಾಗಿದ್ದು. ಶಾಲಾ ಮುಖ್ಯಸ್ಥರು ಬಾಲಕಿಯರಿಗೆ ಪ್ರವೇಶಾವಕಾಶ ನೀಡಿದಾಗ ಸಮಸ್ಯೆ ಗಂಭೀರ ಪರಿಣಾಮಕ್ಕೆ ತಿರುಗಿದೆ.

ನಿನ್ನೆ ಶಾಲಾ ಆರಂಭದ ದಿನ ಜಿಲ್ಲಾ ಶಿಕ್ಷಣಾಧಿಕಾರಿಗಳು ಶಾಲೆಯ ನಿರ್ಧಾರಕ್ಕೆ ವಿರುದ್ಧವಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ.

ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸಲು ಶಾಲಾ ಶಿಕ್ಷಣ ಆಡಳಿತ ಮಂಡಳಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾತಿ ನೀಡಲು ನಿರ್ಧರಿಸಿತು. ಇದಕ್ಕೆ ಶಾಲಾ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಬಾಲಕರ ಪ್ರವೇಶಕ್ಕೆ ಧಕ್ಕೆಯುಂಟಾಗದಂತೆ ಬಾಲಕಿಯರಿಗೂ ಪ್ರವೇಶಾವಕಾಶ ನೀಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಶಿಕ್ಷಣ ಇಲಾಖೆ ಬಾಲಕಿಯರಿಗೆ ಸೀಟು ನೀಡಲು ಅನುಮತಿ ಕೊಟ್ಟಿರಲಿಲ್ಲ ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಗಿರೀಶ್ ಚೊಲಯಿಲ್ ತಿಳಿಸಿದ್ದಾರೆ.
ಜಿಲ್ಲಾ ಶಿಕ್ಷಣ ಇಲಾಖೆಯ ನಿಲುವಿನ ವಿರುದ್ಧ ಶಿಕ್ಷಣ ಸಚಿವರನ್ನು ಮತ್ತು ಇತರ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲು ಶಾಲೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com