ಪಠಾಣ್ ಕೋಟ್ ದಾಳಿಗೆ ಪಾಕ್ ಸರ್ಕಾರದ ನೆರವಿತ್ತು ಎಂಬುದಕ್ಕೆ ಸಾಕ್ಷ್ಯ ಇಲ್ಲ: ಎನ್ಐಎ ನಿರ್ದೇಶಕ

ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಸರ್ಕಾರ ಬೆಂಬಲ ನೀಡಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ
ಪಠಾಣ್ ಕೋಟ್
ಪಠಾಣ್ ಕೋಟ್

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಸರ್ಕಾರ ಬೆಂಬಲ ನೀಡಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ರಾಷ್ಟ್ರೀಯ ತನಿಖಾ ತಂಡದ ಪ್ರಧಾನ ನಿರ್ದೇಶಕ ಶರದ್ ಕುಮಾರ್ ಹೇಳಿದ್ದಾರೆ.
ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಪಾಕಿಸ್ತಾನದ ಸರ್ಕಾರಿ ಸಂಸ್ಥೆಗಳಾಗಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ನೆರವು ನೀಡಿಲ್ಲ ಎಂದು ನ್ಯೂಸ್ 18 ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಎನ್ಐಎ ನಿರ್ದೇಶಕ ಶರದ್ ಕುಮಾರ್ ತಿಳಿಸಿದ್ದಾರೆ. 
ದಾಳಿ ನಡೆಸಲು 'ಒಳಗಿನವರ' ಸಹಕಾರವಿತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಶರದ್ ಕುಮಾರ್, ಈ ವರೆಗಿನ ತನಿಖೆಗಳಲ್ಲಿ ಒಳಗಿನವರ ಕೈವಾಡ ಇರುವ ಬಗ್ಗೆಯೂ ಸಾಕ್ಷ್ಯಗಳು ದೊರೆತಿಲ್ಲ. ಪ್ರಕರಣದ ಬಗ್ಗೆ ಭಾರತದಲ್ಲಿ ತನಿಖೆಯನ್ನು ಸಂಪೂರ್ಣಗೊಳಿಸಲಾಗಿದ್ದು, ಪಾಕಿಸ್ತಾನದಲ್ಲಿ ತನಿಖೆ ನಡೆಸಲು ಅಲ್ಲಿನ ಸರ್ಕಾರದಿಂದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಶರದ್ ಕುಮಾರ್ ತಿಳಿಸಿದ್ದಾರೆ.
ಪಠಾಣ್ ಕೋಟ್ ನಲ್ಲಿ ನಡೆದ ಉಗ್ರ ದಾಳಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖಂಡ ಮಸೂದ್ ಅಜರ್ ಹಾಗೂ ಆತನ ಸಹೋದರ ರೌಫ್ ಅಜರ್ ವಿರುದ್ಧ ಸ್ಪಷ್ಟ ಸಾಕ್ಷ್ಯಾಧಾರಗಳಿವೆ ಎಂದು ಶರದ್ ಕುಮಾರ್ ಮಾಹಿತಿ ನೀಡಿದ್ದಾರೆ. ಜವರಿಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಪಾಕಿಸ್ತಾನದ ಜಂಟಿ ತನಿಖಾ ತಂಡ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿ, ಪಾಕ್ ಉಗ್ರರ ಕೈವಾಡ ಇರುವುದನ್ನು ಒಪ್ಪಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com