ಸಾಂದರ್ಭಿಕ ಚಿತ್ರ
ದೇಶ
ಇಂಡಿಯಾ ಗೇಟ್ ಬಳಿ ಒಂದೇ ಕುಟಂಬದ ನಾಲ್ವರಿಗೆ 40 ಮಂದಿಯಿಂದ ಥಳಿತ
ಇಂಡಿಯಾ ಗೇಟ್ ಬಳಿ ಒಂದೇ ಕುಟುಂಬದ ನಾಲ್ವರಿಗೆ ಹಿಗ್ಗಾಮಗ್ಗಾ ಥಳಿಸಿರುವ ಘಟನೆ ಶುಕ್ರವಾರ ರಾತ್ರಿ...
ನವದೆಹಲಿ: ಇಂಡಿಯಾ ಗೇಟ್ ಬಳಿ ಒಂದೇ ಕುಟುಂಬದ ನಾಲ್ವರಿಗೆ ಹಿಗ್ಗಾಮಗ್ಗಾ ಥಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬೊಂಬೆಗಳ ಮಾರಾಟ ಮಾಡುತ್ತಿದ್ದ ವ್ಯಾಪಾರಿ ತನ್ನ ಗುಂಪಿನೊಂದಿಗೆ ಇಂಡಿಯಾ ಗೇಟ್ ನೋಡಲು ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದಾರೆ.
ನಿನ್ನೆ ರಾತ್ರಿ ಸುಮಾರು 11 ಗಂಟೆಯ ವೇಳೆ ಇಂಡಿಯಾ ಗೇಟ್ ನೋಡಲು ಒಂದು ಕುಟುಂಬ ಭೇಟಿ ನೀಡಿದೆ. ಈ ವೇಳೆ ಸಮೀಪದಲ್ಲಿದ್ದ ಬೊಂಬೆಗಳ ಅಂಗಡಿಯಲ್ಲಿ ಮಗುವಿಗೆ ಆಟವಾಡು ಬ್ಯಾಟರಿ ಚಾಲಿತ ಕಾರು ತೆಗೆದುಕೊಂಡಿದ್ದಾರೆ. ಆದರೆ ಕಾರಿನಲ್ಲಿ ಬ್ಯಾಟರಿ ಇಲ್ಲದಿರುವುದನ್ನು ನೋಡಿ ಕಾರು ಬೇಡ ಎಂದು ಹೇಳಿದ್ದಾರೆ. ಆದರೆ ಅಂಗಡಿಯಾತ ಮಾತ್ರ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಅಂಗಡಿ ಮಾಲಿಕ ನಮ್ಮ ಕುಟುಂಬದ ಓರ್ವ ಸದಸ್ಯನ ಮೇಲೆ ಹಲ್ಲೆ ಮಾಡಿದ. ಅದನ್ನು ಪ್ರಶ್ನಿಸಲು ಮುಂದಾದಾಗ ಅಂಗಡಿ ಮಾಲಿಕ ಸೇರಿ ಸುಮಾರು 40 ಮಂದಿಯ ಗುಂಪು ನಮ್ಮ ಮೇಲೆ ಕೋಲು ಮತ್ತು ಬೆಲ್ಟ್ ಗಳಿಂದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳದ ವ್ಯಕ್ತಿ ಹೇಳಿದ್ದಾರೆ. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಕೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ