ದೇಗುಲ ಪ್ರವೇಶ ವೇಳೆ ಸಿಎಂಗೆ ಅಗೌರವ: ಅರ್ಚಕ ವರ್ಗಾವಣೆ

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾಂಪ್ರದಾಯಿಕ ಗೌರವ ನೀಡಲು ನಿರಾಕರಿಸಿದ ಕಾರಣಕ್ಕೆ ..
ಪ್ರಕಾಶ್ ಸಿಂಗ್ ಬಾದಲ್
ಪ್ರಕಾಶ್ ಸಿಂಗ್ ಬಾದಲ್

ಅಮೃತ ಸರ:  ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು  ಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಸಾಂಪ್ರದಾಯಿಕ ಗೌರವ ನೀಡಲು ನಿರಾಕರಿಸಿದ ಕಾರಣಕ್ಕೆ ಅರ್ಚಕ ಬಲ್ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ದೇವಸ್ಥಾನದ ಗರ್ಭಗುಡಿಯಲ್ಲಿ ಬಾದಲ್ ಅವರಿಗೆ ಶಿರೋ ವಸ್ತ್ರ ಸರ್‌ಪೋರಾ ನೀಡಲು ಅರ್ಚಕರು ನಿರಾಕರಿಸಿದ್ದರು. ಈ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಸಿಖ್ ಧರ್ಮಗ್ರಂಥ 'ಗ್ರಂಥ ಸಾಹಿಬ್‌' ಅನ್ನು ಅಪವಿತ್ರಗೊಳಿಸಿದ್ದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಸರ್ಕಾರ ತಿರಸ್ಕಾರಯುತವಾಗಿ ವರ್ತಿಸಿದ್ದನ್ನು ವಿರೋಧಿಸಿ ತಾನು ಸಿಎಂಗೆ ಸರ್‌ಪೋರಾ ಗೌರವ ವಸ್ತ್ರ ನೀಡಲಿಲ್ಲ ಎಂದು ಬಲ್ಬೀರ್ ಸಿಂಗ್ ಹೇಳಿದ್ದಾರೆ.

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಇತ್ತೀಚಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com