ಮಾಲೆಗಾಂವ ಸ್ಫೋಟ: ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಜಾ

2006 ಮಾಲೆಗಾಂವ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ವಿಶೇಷ ಕೋರ್ಟ್ ಸೋಮವಾರ...
ಸ್ಫೋಟದ ನಡೆದ ಸ್ಥಳ ಪರಿಶೀಲಿಸುತ್ತಿರುವ ಎನ್ಐಎ ಅಧಿಕಾರಿ(ಸಂಗ್ರಹ ಚಿತ್ರ)
ಸ್ಫೋಟದ ನಡೆದ ಸ್ಥಳ ಪರಿಶೀಲಿಸುತ್ತಿರುವ ಎನ್ಐಎ ಅಧಿಕಾರಿ(ಸಂಗ್ರಹ ಚಿತ್ರ)
ಮುಂಬೈ: 2006 ಮಾಲೆಗಾಂವ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ವಿಶೇಷ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಎನ್ ಐಎ ವಿಶೇಷ ಕೋರ್ಟ್ ನ ನ್ಯಾಯಾದೀಶ ವಿವಿ ಪಾಟೀಲ್ ಅವರು, ಆರೋಪಿಗಳಾದ ಮನೋರ್ ಸಿಂಗ್, ರಾಜೇಂದ್ರ ಚೌಧರಿ, ಧನ್ ಸಿಂಗ್ ಹಾಗೂ ಲೋಕೇಶ್ ಶರ್ಮಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಎಂಟು ಸಹ ಆರೋಪಿಗಳನ್ನು ಬಿಡುಗಡೆ ಮಾಡಿದ ನಂತರ ಈ ನಾಲ್ವರು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. 
ನಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. 2006ರ ಮಾಲೆಗಾಂವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಗಳು ಜಾಮೀನು ಅರ್ಜಿಯಲ್ಲಿ ವಾದಿಸಿದ್ದಾರೆ, ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎನ್ಐಎ ಪರ ವಕೀಲರು, ಆರೋಪಿಗಳ ವಿರುದ್ಧ ಸಾಕ್ಷ್ಯಗಳಗಳು ಲಭ್ಯವಾಗಿವೆ ಮತ್ತು ಇದೊಂದು ಗಂಭೀರ ಪ್ರಕರಣವಾಗಿದ್ದು ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com