ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆಗೆ ಆಪ್ ಆಗ್ರಹ

ಭ್ರಷ್ಟಾಚಾರ ಮತ್ತು ದಾವೂದ್ ನೊಂದಿಗೆ ನಂಟು ಹೊಂದಿರುವ ಆರೋಪ ಹೊತ್ತಿರುವ ಮಹಾರಾಷ್ಟ್ರದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಭ್ರಷ್ಟಾಚಾರ ಮತ್ತು ದಾವೂದ್ ನೊಂದಿಗೆ ನಂಟು ಹೊಂದಿರುವ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಾಡ್ಸೆ ವಿರುದ್ಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಆಮ್ ಆದ್ಮಿ ಪಕ್ಷ(ಆಪ್) ಆಗ್ರಹಿಸಿದೆ. 
ಖಾಡ್ಸೆ ರಾಜಿನಾಮೆಯಿಂದ ನಮಗೆ ಸಮಾಧಾನವಿಲ್ಲ. ಅವರ ವಿರುದ್ಧ ತನಿಖೆಯಾಗಬೇಕು. ಬಿಜೆಪಿ ಖಾಡ್ಸೆಯನ್ನು ರಕ್ಷಣೆ ಮಾಡುವ ಹುನ್ನಾರ ನಡೆಸಿದೆ. ಹಾಗಾಗಿ ಖಾಡ್ಸೆ ಪತ್ರಿಕಾಗೋಷ್ಠಿ ನಡೆಸಿದಾಗ ಬಿಜೆಪಿ ನಾಯಕರು ಸಾಥ್ ನೀಡಿದ್ದರು ಎಂದು ಆಪ್ ನಾಯಕ ಆಶಿಶ್ ಖೇತನ್ ಆರೋಪಿಸಿದ್ದಾರೆ. 
ಖಾಡ್ಸೆ ವಿರುದ್ಧ ಮೂರು ಪ್ರಕರಣಗಳಿದ್ದರೂ ಇನ್ನು ಎಫ್ಐಆರ್ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದ ಅವರು, ಖಾಡ್ಸೆ ವಿರುದ್ಧ ಸಮಗ್ರ ತನಿಖೆಯಾಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com