ಕಾಂಗ್ರೆಸ್ ನ ಭವಿಷ್ಯದ ಯೋಜನೆಗಳ ನಿರ್ಧಾರಕ್ಕೆ 10 ಸದಸ್ಯರ ತಂಡ ರಚಿಸಿದ ರಾಹುಲ್ ಗಾಂಧಿ

ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ನ ಪುನಶ್ಚೇತನಕ್ಕಾಗಿ ಅದಕ್ಕೆ ಮರು ಶಕ್ತಿ ತುಂಬಲು ರಾಹುಲ್ ಗಾಂಧಿಯವರು...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ನ ಪುನಶ್ಚೇತನಕ್ಕಾಗಿ ಅದಕ್ಕೆ ಮರು ಶಕ್ತಿ ತುಂಬಲು ರಾಹುಲ್ ಗಾಂಧಿಯವರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, 10 ಸದಸ್ಯರನ್ನೊಳಗೊಂಡ ತಂಡವನ್ನು ರಾಹುಲ್ ಗಾಂಧಿಯವರು ರಚಿಸಿದ್ದು, ಸಾಮೂಹಿಕ ನಾಯಕತ್ವ ಮೂಲಕ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಹತ್ತು ಸದಸ್ಯರನ್ನೊಳಗೊಂಡ ತಂಡ ಪ್ರಮುಖ ವಿಷಯಗಳಲ್ಲಿ ಪಕ್ಷದ ನಿಲುವನ್ನು ಪರಿಷ್ಕರಣೆ ಮಾಡಲಿದೆ. ಇದು ಹಿಂದೆ ಯುಪಿಎ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿದ್ದ ರಾಷ್ಟ್ರೀಯ ಸಲಹಾ ಮಂಡಳಿಗೆ ಸಮನಾಗಿ ಇರುತ್ತದೆ.

ಪಕ್ಷದ ಹೊಸ ತಂಡದಲ್ಲಿ 10 ಹಿರಿಯ ಕಾಂಗ್ರೆಸ್ ನಾಯಕರಿರುತ್ತಾರೆ. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಗುಲಾಮ್ ನಬಿ ಆಜಾದ್ ಪ್ರಮುಖರು. ನಾಡಿದ್ದು ಶನಿವಾರ ನಡೆಯಲಿರುವ ರಾಜ್ಯಸಭಾ ಚುನಾವಣೆ ನಂತರ ಈ ಗುಂಪಿನ ಔಪಚಾರಿಕ ಘೋಷಣೆಯಾಗಲಿದೆ.


2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಮೇಲೆ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಕೂಡ ಒಂದರ ಹಿಂದೆ ಒಂದರಂತೆ ಸೋಲನುಭವಿಸುತ್ತಾ ಬಂದಿದೆ. ಇದೀಗ ಕರ್ನಾಟದಲ್ಲಿ ಮಾತ್ರ ಬಹುಮತದಿಂದ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com