
ಲಖನೌ: ಇಸ್ಲಾಮಿಕ್ ಶಿಕ್ಷಣ ಶಾಲೆ ದರುಲ್ ಉಲೂಮ್ ದಿಯೋಬಂದ್ ಲಿಂಗ ತಾರತಮ್ಯ ಗರ್ಭಪಾತ (ಹೆಣ್ಣು ಭ್ರೂಣ ಹತ್ಯೆ) ವಿರುದ್ಧ ಫತ್ವಾ ಹೊರಡಿಸಿದೆ.
ಹೆಣ್ಣು ಭ್ರೂಣಹತ್ಯೆಯನ್ನು ಇಸ್ಲಾಂ ನ ಕಾನೂನು ಹಾಗೂ ದೇಶದ ಕಾನೂನಿಗೆ ವಿರುದ್ಧ ಎಂದು ದರುಲ್ ಉಲೂಮ್ ದಿಯೋಬಂದ್ ಸಂಘಟನೆಯ ವಕ್ತಾರ ಮೌಲಾನಾ ಅಶ್ರಫ್ ಉಸ್ಮಾನಿ ಹೇಳಿದ್ದು, ಇದೆ ಮೊದಲ ಬಾರಿಗೆ ಇಸ್ಲಾಂ ನಲ್ಲಿ ಮೊದಲ ಬಾರಿಗೆ ಲಿಂಗ ತಾರತಮ್ಯ ಗರ್ಭಪಾತ ವಿರೋಧಿಸಿ ಫತ್ವಾ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಿಂಗ ತಾರತಮ್ಯದ ಆಧಾರದಲ್ಲಿ ಗರ್ಭಪಾತ ಮಾಡಿಸುವುದು ಇಸ್ಲಾಂ ಗೆ ವಿರುದ್ಧವಾಗಿದ್ದು ಇದನ್ನು ಅಲ್ಲಾ ಒಪ್ಪುವುದಿಲ್ಲ ಎಂದು ಉಸ್ಮಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಫತ್ವಾ ಹೊರಡಿಸುವುದಕ್ಕೂ ಮುನ್ನ ದರುಲ್ ಉಲೂಮ್ ದಿಯೋಬಂದ್ ಇಸ್ಲಾಮಿಕ್ ಸಂಘಟನೆ ಮುಸ್ಲಿಮರಲ್ಲಿರುವ ಲಿಂಗಾನುಪಾತದ ಬಗ್ಗೆ ಮಾಹಿತಿ ಪಡೆದು ನಂತರ ಫತ್ವ ಹೊರಡಿಸಿದೆ.
ಹೆಣ್ಣು ಭ್ರೂಣದ ಗರ್ಭಪಾತವನ್ನು ದರುಲ್ ಉಲೂಮ್ ಶಿಕ್ಷಣ ಸಂಸ್ಥೆಯ ಕುಲಪತಿ ಹತ್ಯೆಯನ್ನು ಹೇಳಿದ್ದಾರೆ ಎಂದು ಉಸ್ಮಾನಿ ತಿಳಿಸಿದ್ದಾರೆ.
Advertisement