ಪಠಾಣ್ ಕೋಟ್ ವಾಯುನೆಲೆಗೆ ಅಕ್ರಮ ಪ್ರವೇಶ ಮಾಡಿದವರಿಗೆ ಕಂಡಲ್ಲಿ ಗುಂಡು!

ಪಠಾಣ್ ಕೋಟ್ ವಾಯುನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕವೂ ವಾಯುನೆಲೆ ಉಗ್ರರ ಗುರಿಯಾಗಿದೆ
ಪಠಾಣ್ ಕೋಟ್ ವಾಯುನೆಲೆ
ಪಠಾಣ್ ಕೋಟ್ ವಾಯುನೆಲೆ

ಚಂಡೀಗಢ: ಪಠಾಣ್ ಕೋಟ್ ವಾಯುನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕವೂ ವಾಯುನೆಲೆ ಉಗ್ರರ ಗುರಿಯಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ವಾಯುನೆಲೆ ಪ್ರದೇಶದಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ.

ಭದ್ರತೆ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು, ಪಠಾಣ್ ಕೋಟ್ ವಾಯುನೆಲೆಗೆ ಅಕ್ರಮವಾಗಿ ಪ್ರವೇಶಿಸುವವರಿಗೆ ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದು, ಈ ಕುರಿತ ಮಾಹಿತಿಯನ್ನು ವಾಯು ನೆಲೆಯ ಹೊರಭಾಗದ ಗೋಡೆಗಳ ಮೇಲೆ ಹಾಕಿದ್ದಾರೆ.

ವಾಯುನೆಲೆ ಮೂಲಗಳ ಪ್ರಕಾರ ಪೊಲೀಸ್ ಇಲಾಖೆಗೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ ಸಿಕ್ಕಿದ್ದು, ವಾಯುನೆಲೆ ಉಗ್ರರ ಟಾರ್ಗೆಟ್ ಆಗಿದ್ದು ಇನ್ನೂ ಅಪಾಯದ ಅಂಚಿನಿಂದ ಹೊರಬಂದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಪೊಲೀಸರು, ಭಿತ್ತಿ ಪತ್ರಗಳನ್ನು ಅಂಟಿಸಿದ್ದು, ಪಠಾಣ್ ಕೋಟ್ ವಾಯುನೆಲೆಯನ್ನು ಅಕ್ರಮವಾಗಿ ಪ್ರವೇಶಿಸುವವರಿಗೆ ಮುನ್ನೆಚ್ಚರಿಕೆ ನೀಡದೇ ಕಂಡಲ್ಲಿ ಗುಂಡಿಕ್ಕಲಾಗುವುದು ಎಂದು ಎಚ್ಚರಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ನಾವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಎಚ್ಚರಿಕೆಯುಳ್ಳ ಭಿತ್ತಿಪತ್ರಗಳನ್ನು ಅಂತಿಸಲಾಗಿದ್ದು ಫ್ಲಾಗ್ ಮಾರ್ಚ್ ನಡೆಸಲಾಗಿದೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com