ನಿಮ್ಮ ಕೆಲಸ ಸರ್ಟಿಫಿಕೇಟ್ ನೀಡುವುದು, ಸೆನ್ಸಾರ್ ಮಾಡುವುದಲ್ಲ: ನಿಹಾನಿಗೆ ಮುಂಬೈ ಹೈಕೋರ್ಟ್ ಛೀಮಾರಿ

ತಮ್ಮ ಕೆಲಸ ಚಿತ್ರಗಳಿಗೆ ಪ್ರಮಾಣಪತ್ರ ನೀಡುವುದೇ ಹೊರತು ಸೆನ್ಸಾರ್ ಮಾಡುವುದಲ್ಲ ಎಂದು ಮುಂಬೈ ಹೈಕೋರ್ಟ್ ಕೇಂದ್ರ ಸೆನ್ಸಾರ್...
ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ
ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ

ಮುಂಬೈ: ತಮ್ಮ ಕೆಲಸ ಚಿತ್ರಗಳಿಗೆ ಪ್ರಮಾಣಪತ್ರ ನೀಡುವುದೇ ಹೊರತು ಸೆನ್ಸಾರ್ ಮಾಡುವುದಲ್ಲ ಎಂದು ಮುಂಬೈ ಹೈಕೋರ್ಟ್ ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿಯವರಿಗೆ ನೆನಪಿಸಿದೆ.

ಬಿಡುಗಡೆಗೆ ಸಿದ್ಧವಾಗಿರುವ ಉಡ್ತಾ ಪಂಜಾಬ್ ಸಿನಿಮಾದ 89 ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಹೇಳಿರುವುದಕ್ಕೆ ಚಿತ್ರದ ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ಅವರ ಫಾಂಟಮ್ ಫಿಲ್ಸ್ಮ್ ನಿಹಲಾನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಕಾನೂನಿನಲ್ಲಿ ಕಾಯ್ದೆ ಎನ್ನುವುದು ಎಲ್ಲಿಯೂ ಇಲ್ಲ. ನಿಮ್ಮ ಅಧಿಕಾರ ಕೇವಲ ಚಿತ್ರ ಬಿಡುಗಡೆಯಾಗುವ ಮುನ್ನ ಪ್ರಮಾಣೀಕರಣ ನೀಡುವುದಷ್ಟೆ ಎಂದು ಇಂದು ಆದೇಶ ನೀಡಿದೆ. ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಸೋಮವಾರ ಅಂತಿಮ ಆದೇಶ ನೀಡಲಿದೆ.

ಚಿತ್ರಕ್ಕೆ ಸಂಬಂಧಪಟ್ಟಂತೆ ಸೆನ್ಸಾರ್ ಮಂಡಳಿ ಇಷ್ಟೊಂದು ವಿವಾದ ಏಕೆ ಸೃಷ್ಟಿಸುತ್ತಿದೆ. ಮಂಡಳಿಯ ಈ ಕ್ರಮ ಜಿಗುಪ್ಸೆ ಹುಟ್ಟಿಸುತ್ತದೆ. ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಉದನ್ನು ತಡೆಯಬೇಕು. ಇಂದಿನ ಜನಾಂಗ ಪ್ರೌಢರಾಗಿದ್ದು, ಬೇರೆಯವರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಆದರೆ ಸೆನ್ಸಾರ್ ಮಂಡಳಿ ಇದಕ್ಕೆ ವಿರುದ್ಧವಾಗಿ ಹೋಗುತ್ತಿದೆ ಎಂದು ಕೋರ್ಟ್ ಛೀಮಾರಿ ಹಾಕಿದೆ.

ಸ್ವತಃ ಚಿತ್ರ ನಿರ್ಮಾಪಕರಾಗಿರುವ ಪಹ್ಲಾಜ್ ನಿಹಲಾನಿಯವರ ಕ್ರಮಕ್ಕೆ ಚಿತ್ರರಂದ ಗಣ್ಯರಿಂದ ವಿರೋಧ ವ್ಯಕ್ತವಾಗಿದೆ. ಪಂಜಾಬ್ ನಲ್ಲಿ ಆಳ್ವಿಕೆಯಲ್ಲಿರುವ ಶಿರೋಮಣಿ ಅಕಾಲಿದಳದ ಮೈತ್ರಿ ಪಕ್ಷ ಬಿಜೆಪಿಯ ಪ್ರಭಾವಕ್ಕೊಳಗಾಗಿ ನಿಹಲಾನಿಯವರು ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲು ಹೇಳಿದ್ದಾರೆ ಎಂದು ಕಾಂಗ್ರೆಸ್, ಆಪ್ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ.
ಉಡ್ತಾ ಪಂಜಾಬ್ ಚಿತ್ರದಲ್ಲಿ ರಾಜ್ಯದಲ್ಲಿನ ಡ್ರಗ್ ಮಾಫಿಯಾದ ಬಗ್ಗೆ ವಿವರಿಸಲಾಗಿದ್ದು, ಅಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಇದು ಈಗ ಅಧಿಕಾರದಲ್ಲಿರುವ ಪಕ್ಷದ ಮೇಲೆ ಪರಿಣಾಮ ಬೀರಬಹುದೆಂದು ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂಬುದು ವಿರೋಧ ಪಕ್ಷದವರ ಆರೋಪ.

ಆದರೆ ತಮ್ಮ ಕ್ರಮದ ಹಿಂದೆ ಯಾವುದೇ ರಾಜಕೀಯ ಪ್ರಭಾವ ಇಲ್ಲ ಎಂದು ಪಹ್ಲಾಜ್ ನಿಹಾನಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿಲ್ಲ ಎಂದು ತಿಳಿಸಿದ್ದಾರೆ. ಸಿನಿಮಾಕ್ಕೆ 89 ಕಡೆ ಕತ್ತರಿ ಹಾಕಿರುವ ಕ್ರಮವನ್ನು ಸೆನ್ಸಾರ್ ಮಂಡಳಿ ಸಮರ್ಥಿಸಿಕೊಂಡಿದೆ. ಕಾನೂನುಪ್ರಕಾರವಾಗಿ, ನ್ಯಾಯಯುತವಾಗಿ ಅಗತ್ಯವಿರುವ ಕಡೆ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದೇವೆ. ರಾಜ್ಯವನ್ನು ಚಿತ್ರದಲ್ಲಿ ಸರಿಯಾಗಿ ತೋರಿಸಬೇಕೆಂದು ನ್ಯಾಯಾಲಯದಲ್ಲಿ ಮಂಡಳಿ ಹೇಳಿದೆ. ಆದರೆ ಮಂಡಳಿಯ ವಾದಕ್ಕೆ ನ್ಯಾಯಾಲಯ ತೃಪ್ತವಾದಂತೆ ಕಾಣುತ್ತಿಲ್ಲ.
ಉಡ್ತಾ ಪಂಜಾಬ್ ಚಿತ್ರ ದೇಶಾದ್ಯಂತ ಜೂನ್ 17ರಂದು ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com