ಸ್ವಚ್ಛ ಭಾರತ ಅಭಿಯಾನಕ್ಕೆ 600 ದಿನಗಳು: ನಿಮ್ಮ ನಗರ ಸ್ವಚ್ಛವಾಗಿದೆಯೇ?

ಸಮೀಕ್ಷೆಯೊಂದರ ಪ್ರಕಾರ ಶೇ.52 ರಷ್ಟು ನಾಗರಿಕರು ತಾವು ವಾಸಿಸುತ್ತಿರುವ ಪ್ರದೇಶ ಹಿಂದೆಂದಿಗಿಂತಲೂ ಸ್ವಚ್ಛವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಚ್ಛ ಭಾರತ ಅಭಿಯಾನಕ್ಕೆ 600 ದಿನಗಳು: ನಿಮ್ಮ ನಗರ ಸ್ವಚ್ಛವಾಗಿದೆಯೇ?
ಸ್ವಚ್ಛ ಭಾರತ ಅಭಿಯಾನಕ್ಕೆ 600 ದಿನಗಳು: ನಿಮ್ಮ ನಗರ ಸ್ವಚ್ಛವಾಗಿದೆಯೇ?

ನವದೆಹಲಿ: ಪ್ರಧಾನಿಯ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 600 ದಿನಗಳು ಕಳೆದಿದ್ದು, ಸಮೀಕ್ಷೆಯೊಂದರ ಪ್ರಕಾರ ಶೇ.52 ರಷ್ಟು ನಾಗರಿಕರು ತಾವು ವಾಸಿಸುತ್ತಿರುವ ಪ್ರದೇಶ ಹಿಂದೆಂದಿಗಿಂತಲೂ ಸ್ವಚ್ಛವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಭಿಯಾನ ಪ್ರಾರಂಭವಾದ 600 ದಿನಗಳ ಬಳಿಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರಗತಿ ಕಾಣಿಸಿದೆಯಾದರೂ, ನಾಗರಿಕ ಪ್ರಜ್ಞೆ, ನಗರಸಭೆ, ಪುರಸಭೆಗಳ ಬದ್ಧತೆ ಹಾಗೂ ಪರಿಣಾಮಕಾರಿಯಾದ ಅನುಷ್ಠಾನ ಸವಾಲಿನ ಸಂಗತಿಗಳಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ವಚ್ಛ ಭಾರತ ಅಭಿಯಾನ ಪ್ರಾರಂಭವಾಗಿ 600 ದಿನಗಳು ಕಳೆದಿರುವ ಹಿನ್ನೆಲೆಯಲ್ಲಿ ನಡೆಸಲಾಗಿರುವ ಆನ್ ಲೈನ್ ಸಮೀಕ್ಷೆಯಲ್ಲಿ 40 ,000 ಕ್ಕೂ ಹೆಚ್ಚು ನಾಗರಿಕರನ್ನು ಸಂದರ್ಶಿಸಲಾಗಿದ್ದು, ಶೇ.21 ರಷ್ಟು ಜನರು ಅಭಿಯಾನ ಪ್ರಾರಂಭವಾದ ಒಂದೇ ವರ್ಷದಲ್ಲಿ ಪರಿಣಾಮ ಕಾಣಿಸಿತೆಂದು ಹೇಳಿದ್ದಾರೆ.   
 
ಅಭಿಯಾನ ಪ್ರಾರಂಭವಾದ ಒಂದೆ ವರ್ಷದಲ್ಲಿ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಉತ್ತಮಗೊಂಡಿರುವುದಾಗಿ ಶೇ.12 ರಷ್ಟು ಜನರು ಹೇಳಿದ್ದರೆ, 600 ದಿನಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಹೆಚ್ಚಿದೆ ಎಂದು ಶೇ.23 ರಷ್ಟು ಜನರು ಹೇಳಿದ್ದಾರೆ. ಇನ್ನು ಸ್ವಚ್ಛ ಭಾರತಕ್ಕಾಗಿ ನಾಗರಿಕ ಪ್ರಜ್ಞೆ ಅತಿ ಮಹತ್ವ ಪಡೆಯುತ್ತದೆ ಎಂದು ಶೇ.50 ರಷ್ಟು ಜನರು ಅಭಿಪ್ರಾಯಪಟ್ಟಿದ್ದರೆ. ಶೇ.40 ರಷ್ಟು ಜನರು ಪುರಸಭೆಯ ಜವಾಬ್ದಾರಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  2014 ರ ಅಕ್ಟೋಬರ್ 2 ರಿಂದ ಪ್ರಾರಂಭವಾದ ಅಭಿಯಾನದಿಂದ ನಿಮ್ಮ ನಗರ ಹೇಗಿದೆ ಎಂಬ ಪ್ರಶ್ನೆ ಉತ್ತರಿಸಿರುವ ಶೇ.41 ರಷ್ಟು ನಾಗರಿಕರು ಹಿಂದಿಗಿಂತಲೂ ಬಹಳ ಸ್ವಚ್ಛವಾಗಿದೆ ಎಂದು ಹೇಳಿದ್ದರೆ ಶೇ.40 ರಷ್ಟು ಜನರು ಯಾವುದೇ ಬದಲಾವಣೆ ಇಲ್ಲ ಎಂದೂ ಶೇ.8 ರಷ್ಟು ಜನರು ಮತ್ತಷ್ಟು ಹಾಳಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com