ಅಲಹಾಬಾದ್: ಪಂಚರಾಜ್ಯಗಳ ಚುನಾವಣೆ ಗೆಲ್ಲಲು ಬಿಜೆಪಿ ಪ್ಲಾನ್
ಅಲಹಾಬಾದ್: ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸೂತ್ರ ಕಂಡುಕೊಳ್ಳಲು ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉತ್ತರ ಪ್ರದೇಶದ ರಾಜಧಾನಿ ಅಲಹಾಬಾದ್ ನಲ್ಲಿ ಭಾನುವಾರ ಆರಂಭಗೊಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಕೇಂದ್ರ ಸಂಪುಟದ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಮತ್ತು ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿಯವರು ಇನ್ನಷ್ಟೇ ಸಭೆಯನ್ನುದ್ದೇಶಿ ಮಾತನಾಡಬೇಕಿದೆ.
ಇತ್ತೀಚಿನ ಬೆಳವಣಿಗೆಗಳು:
1. ಪ್ರಧಾನ ಮಂತ್ರಿ ನರೇಂದ್ರ ಮೋದಿ ಐತಿಹಾಸಿಕ ಅಲಹಾಬಾದ್ ಹೈಕೋರ್ಟ್ ಗೆ ಭೇಟಿ ನೀಡಿ ಅಲ್ಲಿ ಸುಮಾರು ಒಂದು ಗಂಟೆ ಕಾಲ ಕಳೆದರು. ಅಲ್ಲಿನ ನ್ಯಾಯಾಧೀಶರ ಜೊತೆ ಸಂವಾದ ನಡೆಸಿದರು. ಅಲಹಾಬಾದ್ ಹೈಕೋರ್ಟ್ ಈ ವರ್ಷ 150ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ.
1. ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿಯು ಗ್ರಾಮೀಣ ಮತ್ತು ನಗರ ಪ್ರದೇಶಗಳ ಬೆಳವಣಿಗೆ, ಸುಧಾರಣೆ ಮತ್ತು ಸಾರ್ವಜನಿಕ ಅಭಿವೃದ್ಧಿ, ರಕ್ಷಣೆ ಮತ್ತು ವಿದೇಶಾಂಗ ನೀತಿಯನ್ನು ಸಮನಾಗಿ ಕಾಣುತ್ತದೆ.
2. ಅಸ್ಸಾಂನಲ್ಲಿ ಬಿಜೆಪಿ ಬೆಳವಣಿಗೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ರಹದಾರಿ.
3. ಚುನಾವಣೆಯಲ್ಲಿ ಬಿಜೆಪಿ ಅಜೆಂಡಾದವನ್ನು ಅಂತಿಮಗೊಳಿಸಲು ಪ್ರಧಾನಿಯವರಿಂದ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಸಭೆ.
4. ಸಭೆಯಲ್ಲಿ ಪಕ್ಷದ ಕಾರ್ಯಸೂಚಿಯನ್ನು ಅಂತಿಮಗೊಳಿಸಲಿರುವ ಬಿಜೆಪಿ. ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಲ್ಲಿ ಚುನಾವಣೆ ನಡೆಯಲಿವೆ.
5. ಆದರೆ ಈ ಸಭೆಯಲ್ಲಿ ಪ್ರಮುಖ ಎರಡು ರಾಜ್ಯಗಳ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ನಿರ್ಧರಿಸುವ ಸಾಧ್ಯತೆ ಕಡಿಮೆ.
6. ಮೋದಿ ಸರ್ಕಾರದ ಎರಡು ವರ್ಷಗಳ ಆಡಳಿತ ಸಾಧನೆಯ ಹೈಲೈಟ್. ಸಭೆಯಲ್ಲಿ ರಾಜಕೀಯ, ಆರ್ಥಿಕ ಮತ್ತು ಕೃಷಿ ನಿರ್ಣಯಗಳನ್ನು ಘೋಷಿಸುವ ಸಾಧ್ಯತೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ