ಬಡವರಿಗೆ ಚಿಕಿತ್ಸೆ ನಿರಾಕರಣೆ: ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ರು. ದಂಡ

ಬಡವರಿಗೆ ಉಚಿತ ಚಿಕಿತ್ಸೆ ನಿರಾಕರಿಸಿದ ಆರೋಪ ಎದುರಿಸುತ್ತಿರುವ ದೆಹಲಿಯ 5 ಖಾಸಗಿ ಆಸ್ಪತ್ರೆಗಳಿಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ 700..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬಡವರಿಗೆ ಉಚಿತ ಚಿಕಿತ್ಸೆ ನಿರಾಕರಿಸಿದ ಆರೋಪ ಎದುರಿಸುತ್ತಿರುವ ದೆಹಲಿಯ 5 ಖಾಸಗಿ ಆಸ್ಪತ್ರೆಗಳಿಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ 700 ಕೋಟಿ ರೂ. ದಂಡ ಪಾವತಿಸಲು ಸೂಚಿಸಿದೆ.

ದೆಹಲಿ ಸರ್ಕಾರವು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್​ಟಿಟ್ಯೂಟ್, ಮ್ಯಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಸಾಕೇತ್), ಶಾಂತಿ ಮುಕುಂದ್ ಆಸ್ಪತ್ರೆ, ಧರ್ಮಶೀಲ ಕ್ಯಾನ್ಸರ್ ಆಸ್ಪತ್ರೆ, ಪುಷ್ಪವತಿ ಸಿಂಘಾನಿಯಾ ರಿಸರ್ಚ್ ಇನ್ಸ್​ಟಿಟ್ಯೂಟ್ ಆಸ್ಪತ್ರೆಗಳಿಗೆ ದಂಡ ಪಾವತಿಸಲು ಸೂಚಿಸಲಾಗಿದೆ.

ದೆಹಲಿ ಸರ್ಕಾರವು ಈ 5 ಆಸ್ಪತ್ರೆಗಳು ಸೇರಿದಂತೆ ಒಟ್ಟು 43 ಖಾಸಗಿ ಆಸ್ಪತ್ರೆಗಳಿಗೆ ರಿಯಾಯತಿ ದರದಲ್ಲಿ ಭೂಮಿ ಒದಗಿಸಿವೆ. ಒಟ್ಟು ರೋಗಿಗಳ ಶೇ. 10 ರಷ್ಟು ಬಡವರಿಗೆ ಒಳರೋಗಿಗಳಾಗಿ ಮತ್ತು ಒಟ್ಟು ರೋಗಿಗಳ ಶೇ. 25ರಷ್ಟು ಬಡರೋಗಿಗಳಿಗೆ ಹೊರ ರೋಗಿಗಳಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ 5 ಆಸ್ಪತ್ರೆಗಳು ನಿಯಮಾವಳಿಗಳಿಗೆ ಅನುಗುಣವಾಗಿ ಬಡವರಿಗೆ ಚಿಕಿತ್ಸೆ ನೀಡಿಲ್ಲ. ಹಾಗಾಗಿ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಹೆಚ್ಚುವರಿ ನಿರ್ದೇಶಕ ಡಾ. ಹೇಮ್ ಪ್ರಕಾಶ್ ತಿಳಿಸಿದ್ದಾರೆ.

ಆದರೆ ಸರ್ಕಾರದ ಈ ಆರೋಪವನ್ನು ಖಾಸಗಿ ಆಸ್ಪತ್ರೆಗಳು ನಿರಾಕರಿಸಿವೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನಾವು ಉಚಿತ ಚಿಕಿತ್ಸೆ ನೀಡಲು ಬದ್ಧರಾಗಿದ್ದೇವೆ. ಹಾಗೆಯೇ ಚಿಕಿತ್ಸೆ ನೀಡುತ್ತಿದೇವೆ ಕೂಡ. ಆದೆರೆ ಸರ್ಕಾರ ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ. ಹೀಗಾಗಿ ನಾವು ಕಾನೂನಿನ ಮೊರೆ ಹೋಗುವುದಾಗಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com