
ನವದೆಹಲಿ: ಇಸೀಸ್ ಉಗ್ರ ಸಂಘಟನೆ ಪಾಕಿಸ್ತಾನಕ್ಕಿಂತ ಹೆಚ್ಚು ಕಾಶ್ಮೀರದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂಬ ಸ್ಫೋಟಕ ಮಾಹಿತಿ ಎನ್ಐಎ ಚಾರ್ಜ್ ಶೀಟ್ ನಿಂದ ಬಹಿರಂಗವಾಗಿದೆ.
ಭಾರತವೂ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಇಸೀಸ್ ಉಗ್ರ ಸಂಘಟನೆ ಬೆಂಬಲಿಗರು ನಡೆಸಿರುವ ವೆಬ್ ಸಂಭಾಷಣೆಯನ್ನು ಕೂಲಂಕುಷವಾಗಿ ಗಮನಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ, ಕಾಶ್ಮೀರ, ಇಸೀಸ್ ಭಯೋತ್ಪಾದಕರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ಇತ್ತೀಚೆಗಷ್ಟೆ ಇಸೀಸ್ ಬೆಂಬಲಿಗ ಮೊಹಮ್ಮದ್ ಸಿರಾಜುದ್ದೀನ್ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಿದೆ.
ಭಾರತದ ಇಸೀಸ್ ಬೆಂಬಲಿಗ ಸಿರಾಜುದ್ದೀನ್ ನೊಂದಿಗೆ ಸಂಪರ್ಕದಲ್ಲಿದ್ದ ಯುಎಇಯಲ್ಲಿರುವ ಇಸೀಸ್ ಬೆಂಬಲಿಗ ಕಾಶ್ಮೀರ ಇಸ್ಲಾಮಿಕ್ ಸ್ಟೇಟ್ ಗೆ ಸೇರಲಿದೆ ಇನ್ ಶಾ ಅಲ್ಲಾಹ್ ಎಂದು ಸಂದೇಶ ಕಳಿಸಿರುವುದು ಎನ್ಐಎ ಚಾರ್ಜ್ ಶೀಟ್ ಮೂಲಕ ತಿಳಿದುಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿರಾಜುದ್ದೀನ್ ಕಾಶ್ಮೀರದಲ್ಲಿ ಆಧಿಪತ್ಯ ಸ್ಥಾಪಿಸಲು ಇಸೀಸ್ ಯತ್ನಿಸಿದರೆ, ಲಷ್ಕರ್-ಎ-ತೊಯ್ಬಾ, ಜೆಇಎಂ, ಹಿಜ್ಬುಲ್-ಮುಜಾಹಿದ್ದೀನ್ ಉಗ್ರ ಸಂಘಟನೆ ವಿರೋಧ ವ್ಯಕ್ತಪಡಿಸುವುದರೊಂದಿಗೆ ಭಾರತೀಯ ಸೇನೆಯೂ ಇಸೀಸ್ ಮೇಲೆ ದಾಳಿ ನಡೆಸಲಿದೆ ಎಂದು ಹೇಳಿದ್ದಾನೆ.
ಇನ್ನು 2015 ರ ನವೆಂಬರ್ 17 ರಂದು ವಿಶ್ವ ಹಿಂದೂ ಪರಿಷತ್ ನ ನಾಯಕ ಅಶೋಕ್ ಸಿಂಘಾಲ್ ಮೃತಪಟ್ಟಾಗ ಇಸೀಸ್ ಉಗ್ರರು ಸಂಭ್ರಮಾಚರಣೆ ಮಾಡಿದ್ದರು ಎಂಬ ಅಂಶವೂ ಎನ್ಐಎ ಚಾರ್ಜ್ ಶೀಟ್ ಮೂಲಕ ತಿಳಿದುಬಂದಿದೆ.
Advertisement