ರೆಫ್ರಿಜರೇಟರ್ ಸಮಸ್ಯೆಯನ್ನು ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಬಳಿ ಹೇಳಿಕೊಂಡ ಭೂಪ!

ಸಾರ್ವಜನಿಕ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ ಸಚಿವರು ಸ್ಪಂದಿಸುತ್ತಾರೆ ಎಂದು ಕ್ಷುಲ್ಲಕ ಕಾರಣಗಳಿಗೆ ಟ್ವೀಟ್ ಮಾಡಿದ ಅನೇಕ ಉದಾಹರಣೆಗಳಿದ್ದು, ಇದಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನವದೆಹಲಿ: ಸಾರ್ವಜನಿಕ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ ಸಚಿವರು ಸ್ಪಂದಿಸುತ್ತಾರೆ ಎಂದು ಕ್ಷುಲ್ಲಕ ಕಾರಣಗಳಿಗೆ ಟ್ವೀಟ್ ಮಾಡಿದ ಅನೇಕ ಉದಾಹರಣೆಗಳಿದ್ದು, ಇದಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಸ್ಯಾಮ್ ಸಂಗ್ ಕಂಪನಿ ತನಗೆ ದೋಷಪೂರಿತ ಫ್ರಿಡ್ಜ್ ಮಾರಾಟ ಮಾಡಿರುವುದು ಅಲ್ಲದೆ, ಉತ್ಪನ್ನವನ್ನು ಬದಲಾವಣೆ ಮಾಡಲೂ ಒಪ್ಪುತ್ತಿಲ್ಲ ಎಂದು ವ್ಯಕ್ತಿಯೊಬ್ಬ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟರ್ ನಲ್ಲಿ ದೂರು ನೀಡಿದ್ದಾನೆ.


ವೆಂಕಟ್ ಎಂಬ ವ್ಯಕ್ತಿ,  ರೆಫ್ರಿಡ್ಜರೇಟರ್ ಖರೀದಿಯಲ್ಲಿ ಸ್ಯಾಮ್ ಸಂಗ್ ನಿಂದ ಮೋಸವಾಗಿದ್ದು, ದೋಷಪೂರಿತ ಫ್ರಿಡ್ಜ್ ನ್ನು ಮಾರಾಟ ಮಾಡಿರುವ ಸಂಸ್ಥೆ ಫ್ರಿಡ್ಜ್ ನ್ನು ಬದಲಾವಣೆ ಮಾಡಿಕೊಡಲು ಒಪ್ಪದೇ, ದುರಸ್ತಿ ಮಾಡಿಸಿಕೊಳ್ಳಿ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದು, ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡುವ ಬದಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟರ್ ಮೂಲಕ ದೂರು ನೀಡಿದ್ದಾನೆ.

ವಿಶೇಷವೆಂದರೆ ಇದಕ್ಕೂ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ತಮ್ಮಾ, ನಾನು ತಮಗೆ ರೆಫ್ರಿಡ್ಜರೇಟರ್ ವಿಷಯದಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ನಾನು ತೊಂದರೆಯಲ್ಲಿರುವ ನಾಗರಿಕರನ್ನು ರಕ್ಷಿಸುವುದರಲ್ಲಿ ನಿರತಳಾಗಿದ್ದೇನೆ ಎಂದು ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com