
ನವದೆಹಲಿ: ರಾಷ್ಟ್ರಪತಿಗಳಿಂದ ಸಂಸದೀಯ ಕಾರ್ಯದರ್ಶಿಗಳ ಮಸೂದೆ ತಿರಸ್ಕಾರಗೊಂಡಿರುವ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿಗಳ ಸರಣಿಯನ್ನು ಮುಂದುವರೆಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನನ್ನನ್ನು ಟಾರ್ಗೆಟ್ ಮಾಡಿ ದೆಹಲಿಯ ಜನತೆಯನ್ನು ಟಾರ್ಗೆಟ್ ಮಾಡಬೇಡಿ ಎಂದು ಮೋದಿ ಅವರಲ್ಲಿ ವಿನಂತಿ ಮಾಡಿದ್ದಾರೆ.
ನಿಮ್ಮ ಸರ್ಕಾರ ಮಾಡಿದರೆ ಅದು ಕಾನೂನಾತ್ಮಕ ನಮ್ಮ ಸರ್ಕಾರ ಮಾಡಿದರೆ ಮಾತ್ರ ಅದು ಅಕ್ರಮವಾಗಲಿದೆ, ನನ್ನಟ್ಟು ಟಾರ್ಗೆಟ್ ಮಾಡಿ, ಬೇಕಾದರೆ ನನ್ನನ್ನು ಥಳಿಸಿ, ಆದರೆ ದೆಹಲಿಯ ಜನತೆಯನ್ನು ಮಾತ್ರ ಕಿರುಕುಳ ನೀಡಬೇಡಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ, ದೆಹಲಿಯಲ್ಲಿ ನಡೆಯುತ್ತಿರುವ ಒಳ್ಳೆಯ ಕೆಲಸಗಳಿಗೆ ತಡೆಯೊಡ್ಡಬೇಡಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ. ದೆಹಲಿ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಈ 21 ಸಂಸದೀಯ ಕಾರ್ಯದರ್ಶಿಗಳು ಅತ್ಯಂತ ಶ್ರಮ ವಹಿಸಿದ್ದು ಸರ್ಕಾರದ ಕಣ್ಣು, ಕಿವಿ, ಕೈಗಳಂತೆ ದುಡಿದಿದ್ದಾರೆ. ಈ ಹಿಂದೆ ಬಿಜೆಪಿ, ಕಾಂಗ್ರೆಸ್ ಸಹ ಇದೇ ಮಾದರಿಯನ್ನು ಅನುಸರಿಸಿದ್ದವು ಆದರೆ ಈಗ ಸಂಸದೀಯ ಕಾರ್ಯದರ್ಶಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
Advertisement