ಗಿರ್ ಅಭಯಾರಣ್ಯ ವಶಕ್ಕೆ ಪಡೆದ 17 ಸಿಂಹಗಳಲ್ಲಿ ಒಂದು ನರಭಕ್ಷಕ

ಗುಜರಾತ್‌ನ ಗಿರ್‌ ಅರಣ್ಯ ಧಾಮದಲ್ಲಿ ಮೂವರನ್ನು ಕೊಂದು ಮನುಷ್ಯನ ಮಾಂಸದ ರುಚಿ ಸವಿದಿದ್ದ ನರಭಕ್ಷಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್‌: ಗುಜರಾತ್‌ನ ಗಿರ್‌ ಅರಣ್ಯ ಧಾಮದಲ್ಲಿ ಮೂವರನ್ನು ಕೊಂದು ಮನುಷ್ಯನ ಮಾಂಸದ ರುಚಿ ಸವಿದಿದ್ದ  ನರಭಕ್ಷಕ ಸಿಂಹವನ್ನು ಗುರುತಿಸುವ ಸಲುವಾಗಿ 17 ಶಂಕಿತ ಸಿಂಹಗಳನ್ನು ಕಳೆದ ತಿಂಗಳು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆ 17 ಸಿಂಹಗಳಲ್ಲಿ ನರಭಕ್ಷಕ ಗಂಡು ಸಿಂಹವನ್ನು ಗುರುತಿಸಲಾಗಿದ್ದು, ಅದನ್ನು ಗುಜರಾತ್‌ನ ಶಕ್ಕರ್‌ಬಾಗ್‌ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.

ನರಭಕ್ಷಕ ಸಿಂಹದ ಮಲದಲ್ಲಿ ಗಮನಾರ್ಹ ಪ್ರಮಾಣದ ಮಾನವ ಪಳೆಯುಳಿಕೆಗಳು ಕಂಡು ಬಂದವು. ಹಾಗಾಗಿ ಅದೇ ಸಿಂಹ ನರಭಕ್ಷಕ ಸಿಂಹವೆಂದು ಖಚಿತಪಡಿಸಿಕೊಳ್ಳಲಾಯಿತು. ಸಿಂಹವನ್ನು ಇದೀಗ ಗುಜರಾತ್‌ನ ಶಕ್ಕರ್‌ಬಾಗ್‌ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜುನಗಢ್ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಸಿಂಗ್‌ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ತಿಂಗಳು ಗಿರ್‌ ಅರಣ್ಯ ಧಾಮದಲ್ಲಿ ಮೂವರು ವ್ಯಕ್ತಿಗಳನ್ನು ಸಿಂಹಗಳ ಗುಂಪೊಂದು ಕೊಂದು ಹಾಕಿತ್ತು. ಆದರೆ ನಿರ್ದಿಷ್ಟವಾಗಿ ಈ ಸಿಂಹಗಳ ಗುಂಪಿನಲ್ಲಿ ಯಾವ ಸಿಂಹ ನರಭಕ್ಷಕವೆಂದು ಗೊತ್ತಾಗಿರಲಿಲ್ಲ. ಅದನ್ನು ಖಚಿತಪಡಿಸಿಕೊಳ್ಳಲು ಆ ಗುಂಪಿನ 17 ಸಿಂಹಗಳನ್ನು ಹಿಡಿಯಲಾಗಿತ್ತು. ಅವುಗಳನ್ನು ಪ್ರತ್ಯೇಕವಾಗಿ ಇರಿಸಿ ಅವುಗಳ ಮೇಲೆ ಕಣ್ಗಾವಲು ಇಡಲಾಗಿತ್ತು. ಈಗ ಕೂಲಂಕಷ ಪರೀಕ್ಷೆಯಿಂದ ನಿರ್ದಿಷ್ಟ ಸಿಂಹದ ಮಲದಲ್ಲಿ ಗಮನಾರ್ಹ ಪ್ರಮಾಣದ ಮಾನವ ಪಳೆಯುಳಿಕೆ ಇರುವುದು ಕಂಡು ಬಂತು.ಆ ಸಿಂಹವೇ ನರ ಭಕ್ಷಕ ಸಿಂಹವೆಂದು ಖಚಿತ ಪಡಿಸಿಕೊಳ್ಳಲಾಯಿತು ಎಂದು ಸಿಂಗ್‌ ಹೇಳಿದರು.

ಜುನಾಗಢ ಜಿಲ್ಲೆಯ ಪಕ್ಕದಲ್ಲಿರುವ ಗಿರ್‌ ಅರಣ್ಯ ಧಾಮದಲ್ಲಿ ಕಳೆದ ತಿಂಗಳು ಓರ್ವ ಬಾಲಕ, ಮಹಿಳೆ ಮತ್ತು ಓರ್ವ ಪುರುಷನನ್ನು ಸಿಂಹವು ತಿಂದು ಹಾಕಿತ್ತು. ಈ ನರಭಕ್ಷಕ ಸಿಂಹವು ಇತರ 16 ಸಿಂಹಗಳ ಗುಂಪಿನಲ್ಲಿತ್ತು. ಅದನ್ನು ಗುರುತಿಸಿ ಪ್ರತ್ಯೇಕಿಸುವುದಕ್ಕಾಗಿ ಅರಣ್ಯ ಇಲಾಖೆ ಎಲ್ಲ 17 ಸಿಂಹಗಳೊಂದಿಗೆ ಪಂಜರದೊಳಗೆ ಬಂಧಿಸುವ ಕಾರ್ಯಾಚರಣೆ ನಡೆಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com