ಜೂ.21 ನಂತರ ಕೇಂದ್ರ ಸಚಿವ ಸಂಪುಟ ಪುನಾರಚನೆ, ಯೋಗಿ ಆದಿತ್ಯನಾಥ್, ಸತ್ಯಪಾಲ್ ಸಿಂಗ್ ಗೆ ಸ್ಥಾನ?

2017 ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಜೂ.21 , ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಳಿಕ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. 2017 ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ.

ಸಚಿವ ಸಂಪುಟ ಪುನಾರಚನೆಗೆ ಇರುವ ಎರಡು ಪ್ರಮುಖ ಉದ್ದೇಶಗಳ ಪೈಕಿ, ವಿಧಾನಸಭಾ ಚುನಾವಣೆ ಒಂದಾದರೆ ಮುಂದಿನ ಹಂತದ ಸುಧಾರಣೆಗಳನ್ನೂ ಜಾರಿಗೆ ತರುವುದು ಮತ್ತೊಂದು ಉದ್ದೇಶವಾಗಿದೆ. ಪ್ರತಿ ಬಾರಿಯೂ ಇಂತಹ ಊಹಾಪೋಹ ಎದುರಾದಾಗ ಪ್ರಧಾನಿ ನರೆಂದ್ರ ಮೋದಿ ಸಂಪುಟ ಪುನಾರಚನೆ ಮಾಡದೆ ಇರುವ ಉದಾಹರಣೆಗಳು ಇವೆ. ಆದರೆ ಈ ಬಾರಿ ಹಿರಿಯ ಬಿಜೆಪಿ ನಾಯಕರೊಬ್ಬರು ಸಚಿವ ಸಂಪುಟ ಪುನಾರಚನೆ ಬಗ್ಗೆ ಸುಳಿವು ನೀಡಿದ್ದು, ಇದನ್ನು ಉತ್ತರ ಪ್ರದೇಶದ ಚುನಾವಣೆಯೊಂದಿಗೆ ತಳುಕು ಹಾಕಬಾರದು ಎಂದು ಹೇಳಿದ್ದಾರೆ. ಹೊಸ ಪ್ರತಿಭೆಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದು ಉತ್ತರ ಪ್ರದೇಶ, ಪಂಜಾಬ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಚಿವ ಸಂಪುಟಕ್ಕೆ ಹೊಸ ಮುಖಗಳು ಪರಿಚಯವಾಗುವ ಸಾಧ್ಯತೆ ಇದೆ. ಶೀಘ್ರವೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದಿಂದ ಯೋಗಿ ಆದಿತ್ಯನಾಥ್, ಸತ್ಯಪಾಲ್ ಸಿಂಗ್, ರಾಜ್ಯಸಭೆಯ ಸಂಸದ ಶಿವ್ ಪ್ರತಾಪ್ ಶುಕ್ಲಾ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com