ವಿಕಿ ಗೋಸ್ವಾಮಿ-ಮಮತಾ ಕುಲಕರ್ಣಿ(ಸಾಂದರ್ಭಿಕ ಚಿತ್ರ)
ದೇಶ
ಡ್ರಗ್ ರಾಕೆಟ್ : ಆರೋಪಿಗಳ ಪಟ್ಟಿಯಲ್ಲಿ ಮಮತಾ ಕುಲಕರ್ಣಿ
ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಡ್ರಗ್ ಅವ್ಯವಹಾರ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ....
ಮುಂಬೈ: ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಡ್ರಗ್ ಅವ್ಯವಹಾರ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ.
ಮಹಾರಾಷ್ಟ್ರದ ಥಾಣೆ ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದು, ಮಮತಾ ಕುಲಕರ್ಣಿ ಮತ್ತು ವಿಕಿ ಗೋಸ್ವಾಮಿಯವರ ಜೊತೆ ಸಂಪರ್ಕದಲ್ಲಿರುವ ಕೆಲವು ಬಾಲಿವುಡ್ ನಟ-ನಟಿಯರನ್ನು ಕೂಡ ವಿಚಾರಣೆ ನಡೆಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾದಕ ಪದಾರ್ಥ ವ್ಯವಹಾರದ ಕಿಂಗ್ ಪಿನ್ ವಿಕಿ ಗೋಸ್ವಾಮಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹೊಸದಾಗಿ ಸಿಕ್ಕಿರುವ ಸಾಕ್ಷಿ ಪ್ರಕಾರ ಮಮತಾ ಕುಲಕರ್ಣಿ ಕೂಡ ಆರೋಪಿಯಾಗಿದ್ದಾಳೆ. ಸಿಬಿಐ ಮೂಲಕ ರೆಡ್ ಕಾರ್ನರ್ ನೊಟೀಸ್ ಕಳುಹಿಸಲು ಇಂಟರ್ ಪೋಲ್ ಗೆ ಮನವಿ ಮಾಡಿದ್ದೇವೆ. ಮಮತಾ ಅವರ ಬ್ಯಾಂಕ್ ಖಾತೆ ಮತ್ತು ಹೂಡಿಕೆ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ವಿಕಿ ಗೋಸ್ವಾಮಿ ಈಗಾಗಲೇ ಆರೋಪಿಯಾಗಿದ್ದಾರೆ ಎಂದು ಥಾಣೆಯ ಪೊಲೀಸ್ ಅಧಿಕಾರಿ ಪರಮವೀರ್ ಸಿಂಗ್ ತಿಳಿಸಿದ್ದಾರೆ.
ಇವರ ಬಳಿಯಿಂದ ಪೊಲೀಸರು ಕಳೆದ ಏಪ್ರಿಲ್ ನಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.

