
ನವದೆಹಲಿ: ಅಯೋಧ್ಯೆ ರಾಮ ಮಂದಿರವನ್ನು ಧ್ವಂಸಗೊಳಿಸಿದ್ದು ಮೊಘಲ್ ಸಾಮ್ರಾಜ್ಯದ ಸ್ಥಾಪಕ ಬಾಬರ್ ಅಲ್ಲ ಔರಂಗ್ ಜೇಬ್ ಎಂದು ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ತಮ್ಮ ಪುಸ್ತಕ 'ಅಯೋಧ್ಯಾ ರಿವಿಸಿಟೆಡ್' ನಲ್ಲಿ ಉಲ್ಲೇಖಿಸಿದ್ದಾರೆ.
1972ರ ಬ್ಯಾಚ್ ನ ಗುಜರಾತ್ ಕೆಡೆರ್ ಐಪಿಎಸ್ ಅಧಿಕಾರಿಯಾಗಿದ್ದ ಕಿಶೋರ್ ಕುನಾಲ್ ರಾಮ ಮಂದಿರ ಧ್ವಂಸಗೊಳಿಸಿದ್ದು ಔರಂಗ್ ಜೇಬ್ ಎಂದು ವಾದಿಸಿದ್ದು, ಬಾಬರಿ ಮಸೀದಿಗೂ ಮುನ್ನ ಅಲ್ಲಿ ರಾಮ ಮಂದಿರ ಇತ್ತು ಎಂದು ತಮ್ಮ ಪುಸ್ತಕದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಿಶೋರ್ ಕುನಾಲ್ ತಮ್ಮ ಅಯೋಧ್ಯಾ ರಿವಿಸಿಟೆಡ್ ಪುಸ್ತಕಕ್ಕೆ ಪೂರಕವಾಗಿ ಬ್ರಿಟಿಷರ ಲೇಖನಗಳು, ಪುರಾತನ ಸಂಸ್ಕೃತ ಲೇಖನಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ಇನ್ನು ಮಂದಿರ ಧ್ವಂಸಕ್ಕೆ ಹಿಂದೂ ವಿರೋಧಿಯಾಗಿದ್ದ ಔರಂಗ್ ಜೇಬ್ ಕಾರಣ ಎಂದು ತಿಳಿಸಿದ್ದಾರೆ.
ಕ್ರಿ.ಶ 1528ರಲ್ಲಿ ರಾಮಮಂದಿರ ನೆಲಸಮ ಮಾಡಲಾಗಿಲ್ಲ ಬದಲಾಗಿ 1660ರ ಔರಂಗ್ ಜೇಬ್ ಕಾಲದಲ್ಲಿ ಎಂದು ಕುನಾಲ್ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.
Advertisement