ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಬುರ್ಖಾ ವಿವಾದ!

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹೊಸದೊಂದು ವಿವಾದ ಸೃಷ್ಟಿಯಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಸಂಸ್ಥೆ ನಡೆಸುತ್ತಿರುವ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕಿಗೆ ಬುರ್ಖಾ ಧರಿಸದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಬುರ್ಖಾ ವಿವಾದ!
ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಬುರ್ಖಾ ವಿವಾದ!

ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹೊಸದೊಂದು ವಿವಾದ ಸೃಷ್ಟಿಯಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಸಂಸ್ಥೆ ನಡೆಸುತ್ತಿರುವ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕಿಗೆ ಬುರ್ಖಾ ಧರಿಸದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿರುವುದು  ವಿವಾದಕ್ಕೆ ಕಾರಣವಾಗಿದೆ.

ಮೂರು ತಿಂಗಳ ಹಿಂದಷ್ಟೆ ಡೆಲ್ಲಿ ಪಬ್ಲಿಕ್ ಶ್ಕೂಲ್ ಸಂಸ್ಥೆಯ ಶಾಲೆಗೆ ಸೇರಿದ್ದ ಶಿಕ್ಷಕಿ ಬುರ್ಖಾ ಧರಿಸಿ ಶಾಲೆಗೆ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದ ಆಡಳಿತ ಮಂಡಳಿ ಶಾಲೆಯೊಳಗೆ ಬುರ್ಖಾ ಧರಿಸದಂತೆ ಸೂಚನೆ ನೀಡಿತ್ತು. ಈ ಬಗ್ಗೆ ಪ್ರಕಟವಾದ ಪತ್ರಿಕಾ ವರದಿಗಳನ್ನಾಧರಿಸಿ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಶಾಸಕ ಶೇಖ್ ಅಬ್ದುಲ್ ರಶೀದ್ ವಿಷಯ ಪ್ರಸ್ತಾಪಿಸಿದ್ದು, ಮುಸ್ಲಿಂ ಬಹುಸಂಖ್ಯಾತರಾಗಿರುವ ರಾಜ್ಯದಲ್ಲಿ ಮಹಿಳಾ ಶಿಕ್ಷಕಿಗೆ ಬುರ್ಖಾ ಧರಿಸದಂತೆ ಎಚ್ಚರಿಕೆ ನೀಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಕ ಶೇಖ್ ಅಬ್ದುಲ್ ರಶೀದ್ ಪ್ರಸ್ತಾಪಿಸಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಡೆಲ್ಲಿ ಪಬ್ಲಿಕ್ ಸ್ಕೂಲ್ ಸೂಚನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಬುರ್ಖಾ ಧರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಇದು ಫ್ರಾನ್ಸ್ ಅಲ್ಲ, ಬಹುಸಂಸ್ಕೃತಿಯುಳ್ಳ ಜಮ್ಮು-ಕಾಶ್ಮೀರ ಎಂದು ಹೇಳಿದೆ.

ಇಲ್ಲಿನ ಜನರು ಬುರ್ಖಾ ಧರಿಸಬೇಕೋ ಬೇಡವೋ ಎಂಬುದನ್ನು ಸರ್ಕಾರ ಅಥವಾ ಇನ್ನಿತರ ಸಂಸ್ಥೆಗಳು ನಿರ್ಧರಿಸಲು  ಇದು ಫ್ರಾನ್ಸ್ ಅಲ್ಲ ಎಂದು ಸರ್ಕಾರ ಡೆಲ್ಲಿ ಪಬ್ಲಿಕ್ ಸ್ಕೂಲ್ ಗೆ ಪ್ರತಿಕ್ರಿಯೆ ನೀದಿರುವುದಕ್ಕೆ ಪೂರಕವಾಗಿ ಬುರ್ಖಾ ಧರಿಸದಂತೆ ಸೂಚನೆ ನೀಡಿದ್ದ ಶಾಲೆಯ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ರಾಜ್ಯದಲ್ಲಿ ಮುಸ್ಲಿಂ ರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com