ಕೇವಲ 3 ಗಂಟೆಯಲ್ಲಿ ದೆಹಲಿಯಿಂದ ವಾರಣಾಸಿಗೆ ತಲುಪಲಿದೆ ಬುಲೆಟ್ ಟ್ರೈನ್

ರಾಷ್ಟ್ರ ರಾಜಧಾನಿ ದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭೆ ಕ್ಷೇತ್ರ ವಾರಣಾಸಿಗೆ ಕೇವಲ ಎರಡು ಗಂಟೆ 40 ನಿಮಿಷಗಳಲ್ಲಿ ಪ್ರಯಾಣ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭೆ ಕ್ಷೇತ್ರ ವಾರಣಾಸಿಗೆ ಕೇವಲ ಎರಡು ಗಂಟೆ 40 ನಿಮಿಷಗಳಲ್ಲಿ  ಪ್ರಯಾಣ ಮಾಡಬಹುದಾಗಿದೆ.

ದೇಶದ ಎರಡನೇ ಬುಲೆಟ್ ಟ್ರೈನ್ ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸಲಿದೆ. ಮುಂಬಯಿ - ಅಹ್ಮದಾಬಾದ್‌ ಕಾರಿಡಾರ್‌ ಬುಲೆಟ್‌ ಟ್ರೇನ್‌ ಬಳಿಕದ ಎರಡನೇ ಬುಲೆಟ್‌ ಟ್ರೇನ್‌ ದಿಲ್ಲಿ - ವಾರಾಣಸಿ ನಡುವೆ ಓಡಲಿದ್ದು ಇದು 782 ಕಿ.ಮೀ. ದೂರದ ಹಾದಿಯನ್ನು ಕೇವಲ ಎರಡು ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ, ದೆಹಲಿ- ವಾರಾಣಸಿ ಬುಲೆಟ್‌ ಟ್ರೇನ್‌ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುವುದು ಮತ್ತು ಜನರಿಗೆ ಕೇಂದ್ರದಲ್ಲಿನ ಎನ್‌ಡಿಎ ಸರಕಾರವು ಅಭಿವೃದ್ಧಿ ಸಾಧನೆಯನ್ನೇ ಮೂಲ ಮಂತ್ರವಾಗಿ ಇರಿಸಿಕೊಂಡಿರುವುದನ್ನು ಜನರಿಗೆ ಮನವರಿಕೆ ಮಾಡಲಾಗುವುದು.

ದೆಹಲಿ ಮತ್ತು ಲಕ್ನೋ ನಡುವಿನ 506 ಕಿ.ಮೀ.ಗಳ ದೂರವನ್ನು ಪ್ರಸ್ತಾವಿತ ಬುಲೆಟ್‌ ಟ್ರೇನ್‌ 1 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಲಿರುವುದು ಕೂಡ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ದೆಹಲಿ ಮತ್ತು ವಾರಣಾಸಿ ನಡುವಿನ ಬುಲೆಟ್ ರೈಲು ನಿರ್ಮಾಣಕ್ಕೆ ಸುಮಾರು 43 ಸಾವಿರ ಕೋಟಿ ರು ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com