ಸಾರಾಯಿ, ತಂಬಾಕು ಮೊದಲು ನಿಷೇಧಿಸಿ: ಮೋದಿಗೆ ಭೀಷ್ಮ ನಾರಾಯಣ್ ಸಿಂಗ್ ಆಗ್ರಹ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ತಂಬಾಕು ಮತ್ತ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಅಸ್ಸಾಂ ಮತ್ತು ತಮಿಳುನಾಡು ಮಾಜಿ ರಾಜ್ಯಪಾಲ ...
ಭೀಷ್ಮ ನಾರಾಯಣ್ ಸಿಂಗ್
ಭೀಷ್ಮ ನಾರಾಯಣ್ ಸಿಂಗ್

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ತಂಬಾಕು ಮತ್ತ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಅಸ್ಸಾಂ ಮತ್ತು ತಮಿಳುನಾಡು ಮಾಜಿ ರಾಜ್ಯಪಾಲ ಭೀಷ್ಮ ನಾರಾಯಣ್ ಸಿಂಗ್ ಆಗ್ರಹಿಸಿದ್ದಾರೆ.

ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗವನ್ನು ಭಾರತೀಯರು ಹಲವು ವರ್ಷಗಳಿಂದ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಯೋಗ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಬೇಕು ಎಂದರೇ ಸಾರಾಯಿ ಮತ್ತು ತಂಬಾಕು ನಿಷೇಧ ಆಗಬೇಕು ಎಂದು ಅವರು ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆಗಿನ ವೈರತ್ವವನ್ನು ಮರೆತು, ಪ್ರಧಾನಿ ನರೇಂದ್ರ ಮೋದಿ ಬಿಹಾರದಂತೆ ದೇಶಾದ್ಯಂತ ಸಾರಾಯಿ ನಿಷೇಧ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಾರಾಯಿ ನಿಷೇಧ ಮಾಡಿದರೇ ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ವಾದ, ಆದರೇ ಆದಾಯಕ್ಕೆ ಪರಿಹಾರ ವಾಗಿ ಹಲವು ಕುಟುಂಬಗಳಿಗೆ ಸಂತೋಷ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com