
ಮುಂಬೈ: ಕುಸ್ತಿ ಪಟುವಾಗಿ ನಟಿಸಿದ್ದ ಸಮಯದಲ್ಲಿ ತಾವು ಅನುಭವಿಸಿದ್ದ ಪಾಡನ್ನು ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ದಯನೀಯ ಸ್ಥಿತಿಗೆ ಹೋಲಿಕೆ ಮಾಡಿದ್ದ ಸಲ್ಮಾನ್ ಖಾನ್ ಹೇಳಿಕೆಗೆ ಅವರ ತಂದೆ ಸಲೀಮ್ ಖಾನ್ ಕ್ಷಮೆ ಯಾಚಿಸಿದ್ದಾರೆ.
" ಸಲ್ಮಾನ್ ಖಾನ್ ನೀಡಿದ್ದ ಹೇಳಿಕೆ ತಪ್ಪು ಎಂದಿರುವ ಸಲೀಮ್ ಖಾನ್, ಸಲ್ಮಾನ್ ಖಾನ್ ನೀಡಿದ್ದ ಹೇಳಿಕೆ ಹಿಂದಿನ ಭಾವನೆ ತಪ್ಪಾಗಿರಲಿಲ್ಲ ಎಂದು ಸಲೀಮ್ ಖಾನ್ ಸಮರ್ಥನೆ ನೀಡಿದ್ದಾರೆ. ಅದೇನೇ ಆಗಲಿ ಸಲ್ಮಾನ್ ಖಾನ್ ನೀಡಿರುವ ಹೇಳಿಕೆಗೆ ಅವರ ಪರವಾಗಿ, ಕುಟುಂಬದ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಸಲೀಮ್ ಖಾನ್ ಟ್ವೀಟ್ ಮಾಡಿದ್ದಾರೆ.
ಖಾಸಗಿ ವಾಹನಿಯೊಂದರ ಸಂದರ್ಶನದಲ್ಲಿ ಸುಲ್ತಾನ್ ಚಿತ್ರದ ಕುರಿತಂತೆ ಮಾತನಾಡಿದ್ದ ಸಲ್ಮಾನ್ ಖಾನ್, ಕುಸ್ತು ಪಟುವಾಗಿ ನಟಿಸಿದ್ದ ಸಮಯದಲ್ಲಿ ತಾವು ಅನುಭವಿಸಿದ್ದ ಪಾಡನ್ನು ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ದಯನೀಯ ಸ್ಥಿತಿಗೆ ಹೋಲಿಕೆ ಮಾಡಿಕೊಂಡಿದ್ದರು. ಇದು ವಿವಾದಕ್ಕೆ ತಿರುಗಿ ಸಲ್ಮಾನ್ ಖಾನ್ ಕ್ಷಮೆ ಯಾಚಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
Advertisement