ಸುನೀತ ಕೃಷ್ಣನ್-ಸಲ್ಮಾನ್ ಖಾನ್
ದೇಶ
ಸಲ್ಮಾನ್ ಗೆ ನಾಚಿಕೆಯಾಗಬೇಕು: ರೇಪ್ ಸಂತ್ರಸ್ತೆ ಸುನೀತಾ ಕೃಷ್ಣನ್ ಬಹಿರಂಗ ಪತ್ರ
ಅತ್ಯಾಚಾರದ ನಂತರ ಹೆಣ್ಣಿನ ಸ್ಥಿತಿ ಕುರಿತು ಲೇವಡಿ ಮಾಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಗ್ಯಾಂಗ್ ರೇಪ್ ಸಂತ್ರಸ್ತೆ ಹಾಗೂ ಪದ್ಮಶ್ರೀ ಪುರಸ್ಕೃತ ಸಾಮಾಜಿಕ...
ನವದೆಹಲಿ: ಅತ್ಯಾಚಾರದ ನಂತರ ಹೆಣ್ಣಿನ ಸ್ಥಿತಿ ಕುರಿತು ಲೇವಡಿ ಮಾಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಗ್ಯಾಂಗ್ ರೇಪ್ ಸಂತ್ರಸ್ತೆ ಹಾಗೂ ಪದ್ಮಶ್ರೀ ಪುರಸ್ಕೃತ ಸಾಮಾಜಿಕ ಹೋರಾಟಗಾರ್ತಿ ಸುನಿತಾ ಕೃಷ್ಣನ್ ಬಹಿರಂಗ ಪತ್ರ ಬರೆದಿದ್ದು, ಈ ರೀತಿ ಹೇಳಿಕೆ ನೀಡಲು ಸಲ್ಮಾನ್ ಖಾನ್ ಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವೇದನೆಯೇ ಇಲ್ಲದ ಸಲ್ಮಾನ್ ಖಾನ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ನನ್ನಿಂದ ಸಾಧ್ಯವಿಲ್ಲ. ಅತ್ಯಾಚಾರ ಕುರಿತಾದ ಆತನ ರಾಕ್ಷಸಿ ತಿಳುವಳಿಕೆಯನ್ನು ಎಷ್ಟು ಜರಿದರೂ ತೃಪ್ತಿಯಾಗುತಿಲ್ಲಿ ಎಂದು ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನ ಬಹುನಿರೀಕ್ಷಿತ ಸುಲ್ತಾನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಶೂಟಿಂಗ್ ಮುಗಿದ ಬಳಿಕ ನನ್ನ ಸ್ಥಿತಿ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗುತ್ತಿತ್ತು ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ