ವಾಟ್ಸಾಪ್ ನಿಂದ ಭಯೋತ್ಪಾದನೆ ಹೆಚ್ಚಳ: ಬ್ಯಾನ್ ಮಾಡುವಂತೆ ಪಿಐಎಲ್

ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ವೈಬರ್ ಮೆಸೇಜಿಂಗ್ ಆಪ್​ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು, ಭಯೋತ್ಪಾದನೆಯ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ವೈಬರ್ ಮೆಸೇಜಿಂಗ್ ಆಪ್​ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು, ಭಯೋತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಭಾರದಲ್ಲಿ ಇಂತಹ ಮೆಸೇಜಿಂಗ್ ಆಪ್​ಗಳನ್ನು ನಿಷೇಧ ಮಾಡಬೇಕೆಂದು ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕೋಟ್ಯಾಂತರ ಜನರನ್ನು ಆಕರ್ಷಿಸಿದ್ದ ವಾಟ್ಸ್ ಆಪ್ ಭಯೋತ್ಪಾದನಾ ಚಟುವಟಿಕೆಗಳಿಗೂ ನೆರವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಹರಿಯಾಣ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಸುಧೀರ್ ಯಾದವ್ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದಾರೆ.

ವಾಟ್ಸ್ ಆಪ್​ನ ರಹಸ್ಯಲಿಪಿ ಸೌಲಭ್ಯ ಬಳೆಸಿಕೊಂಡು ಕ್ರಿಮಿನಲ್ಸ್ ಹಾಗೂ ಭಯೋತ್ಪಾದಕರು ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಬ್ಬರು ನಡೆಸಿದ ಮಾತುಕತೆ ಮೂರನೇ ವ್ಯಕ್ತಿಗೆ ದೊರೆಯುವುದಿಲ್ಲ. ಭಯೋತ್ಪಾದಕರು ಸೆರೆ ಸಿಕ್ಕರು ಕಂಪನಿಗಳು ಮಾಹಿತಿ ನೀಡಲು ನಿರಾಕರಿಸುತ್ತವೆ.

265 ಬಿಟ್ ಸಾಮರ್ಥ್ಯದ ರಹಸ್ಯ ಲಿಪಿಯನ್ನು ಭೇದಿಸಲು ಸೂಪರ್ ಕಂಪ್ಯೂಟರ್​ಗಳಿಗೆ ನೂರಾರು ವರ್ಷಗಳು ಬೇಕಾಗುತ್ತವೆ. ಇಂತಹ ಬೆಳವಣಿಗೆಗಳು ಸಂಭಾವ್ಯದಲ್ಲಿ ದೇಶದ ಭದ್ರತೆಗೆ ಅಪಾಯ ಉಂಟು ಮಾಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಈ ಸಂಬಂಧ ಜೂನ್ 29ರಂದು ನ್ಯಾಯಪೀಠ ಪ್ರಕರಣ ಅರ್ಜಿ ವಿಚಾರಣೆ ನಡೆಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com