ನವದೆಹಲಿ: ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಎಎಪಿ ಶಾಸಕ ದಿನೇಶ್ ಮೊಹಾನಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಶನಿವಾರ ವಜಾಗೊಳಿಸಿದ್ದು, ಸೋಮವಾರದವರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಆಪ್ ಶಾಸಕನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಅಂಜನಿ ಮಹಾಜನ್ ಅವರು, ಆರೋಪಿಯನ್ನು ಜೂನ್ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾನು ಮತ್ತು ಕೆಲವು ಮಹಿಳೆಯರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲು ಶಾಸಕರ ಕಚೇರಿಗೆ ಹೋದ ಸಮಯದಲ್ಲಿ ದಿನೇಶ್ ಮೋಹನೀಯ ತಮ್ಮನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜೂನ್ 23ರಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದರು.
ದೂರಿನನ್ವಯ ದೆಹಲಿ ಪೊಲೀಸರು ಇಂದು ದಿನೇಶ್ ಮೊಹನಿಯ ಅವರನ್ನು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯಲ್ಲೇ ಬಂಧಿಸಿ, ನಂತರ ಕೋರ್ಟ್ ಹಾಜರು ಪಡಿಸಿದರು.