
ಇಂದೋರ್: ಮುನಿಸಿಕೊಂಡು ತವರು ಮನೆಗೆ ಹೋಗಿದ್ದ ಹೆಂಡತಿ ವಾಪಸಾಗದಕ್ಕೆ ವಿಚಲಿತನಾದ ಪತಿ ಮಹಾಶಯ ಆಂಜನೇಯನ ವಿಗ್ರಹವನ್ನು ಹಾನಿಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
37ರ ಮನೋಜ್ ಬಂಜಾರಾ ತನ್ನ ಹೆಂಡತಿ ನಾಲ್ಕು ತಿಂಗಳ ಹಿಂದೆ ಮುನಿಸಿಕೊಂಡು ತವರು ಮನೆಗೆ ಹೋಗಿದ್ದಳು. ಮಡದಿಯನ್ನು ಪುನಃ ಕರೆದುಕೊಂಡು ಬರಲು ಮಾಡಿದ್ದ ಪ್ರಯತ್ನಗಳೆಲ್ಲಾ ವಿಫಲವಾಗಿದ್ದು ಕೊನೆಗೆ ದೇವರ ಮೋರೆ ಹೋಗಿದ್ದ.
ದಿನಗಳು ಉರುಳಿದವು ಹೋರತು ಮಡದಿ ಬಾರದಿಂದ ಆಕ್ರೋಶಗೊಂಡ ಮನೋಜ್ ಖೇದಾಪತಿ ಹನುಮಂತನ ದೇವಾಲಯಕ್ಕೆ ಹೋಗಿ ದೇವರ ವಿಗ್ರಹವನ್ನು ಹಾನಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರ ವಿಗ್ರಹವನ್ನು ಹಾನಿಗೊಳಿಸಿರುವುದರಿಂದ ಪಲ್ಡಾದಲ್ಲಿ ಪ್ರಕ್ಷುದ್ಧ ವಾತಾವರಣ ನಿರ್ಮಾಣವಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಬಂಜಾರಾನನ್ನು ಪೊಲೀಸರು ಬಂಧಿಸಿದ್ದಾರೆ.
Advertisement