ಇಂಗ್ಲೀಷ್ ಗೆ ಭಾಷಾಂತರಗೊಂಡ ನೇಪಾಳಿ ರಾಮಾಯಣದ ಕೃತಿ ಬಿಡುಗಡೆ

19 ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ಎಂಬ ಕವಿ ಬರೆದಿದ್ದ ನೇಪಾಳಿ ರಾಮಾಯಣದ ಇಂಗ್ಲಿಷ್ ಗೆ ಭಾಷಾಂತರಗೊಂಡ ಮೊದಲ ಕೃತಿ ಬಿಡುಗಡೆಯಾಗಿದೆ.
ನೇಪಾಳಿ ರಾಮಾಯಣದ ಕರ್ತೃ ಭಾನುಭಕ್ತ ಆಚಾರ್ಯ
ನೇಪಾಳಿ ರಾಮಾಯಣದ ಕರ್ತೃ ಭಾನುಭಕ್ತ ಆಚಾರ್ಯ

ಡಾರ್ಜಿಲಿಂಗ್: 19 ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ಎಂಬ ಕವಿ ಬರೆದಿದ್ದ ನೇಪಾಳಿ ರಾಮಾಯಣದ ಇಂಗ್ಲಿಷ್ ಗೆ ಭಾಷಾಂತರಗೊಂಡ ಮೊದಲ ಕೃತಿ ಬಿಡುಗಡೆಯಾಗಿದೆ. ಗೋಕುಲ್ ಸಿನ್ಹಾ ನೇಪಾಳಿ ರಾಮಾಯಣವನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದು, ಕೃತಿಯನ್ನು ಖ್ಯಾತ ಬರಹಗಾರ ಇಂದಿರಾಬಹದ್ದೂರ್ ರೈ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿದ್ದಾರೆ.

ಭಾನುಭಕ್ತ ಅವರ ರಾಮಾಯಣ ಕೃತಿ ಇತರ ಭಾಷೆಗಳಿಗೆ ಈಗಾಗಲೇ ಅನುವಾದವಾಗಿದೆಯಾದರೂ, ಅದು ಇಂಗ್ಲಿಷ್ ಗೆ ಭಾಷಾಂತರವಾಗಲು 200 ವರ್ಷ ಬೇಕಾಯಿತು, ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಗೋಕುಲ್ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ ಎಂದು ಇಂದಿರಾಬಹದ್ದೂರ್ ರೈ ಹೇಳಿದ್ದಾರೆ.
 
ಭಾನುಭಕ್ತ ಸಂಸ್ಕೃತದಿಂದ ರಾಮಾಯಣವನ್ನು ನೇಪಾಳಿಗೆ ಅನುವಾದ ಮಾಡಿದ್ದು ಮಾತ್ರವಲ್ಲದೇ ಕೃತಿಯಲ್ಲಿ ಭಾನುಭಕ್ತ ಲಯ ಎಂಬ ಕವಿತೆಯನ್ನು ಪರಿಚಯಿಸಿದ್ದಾರೆ ಎಂದು ಇಂದಿರಾಬಹದ್ದೂರ್ ರೈ ಭಾನುಭಕ್ತ ಆಚಾರ್ಯ ಕವಿಯನ್ನು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com