ರೈಲು ಅಪಘಾತಗಳನ್ನು ತಡೆಯಲು ಬರಲಿದೆ 'ತ್ರಿನೇತ್ರ'!

ರೈಲು ಅಪಘಾತಗಳನ್ನು ತಡೆಯಲು ಹೊಸ ವ್ಯವಸ್ಥೆಯೊಂದನ್ನು ರೂಪಿಸಲಾಗಿದ್ದು, ಇದಕ್ಕಾಗಿ ಟೆರೇನ್‌ ಇಮೇಜಿಂಗ್ ವಿಷನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ರೈಲು ಅಪಘಾತಗಳನ್ನು ತಡೆಯಲು ಬರಲಿದೆ 'ತ್ರಿನೇತ್ರ'!
ರೈಲು ಅಪಘಾತಗಳನ್ನು ತಡೆಯಲು ಬರಲಿದೆ 'ತ್ರಿನೇತ್ರ'!
Updated on

ನವದೆಹಲಿ: ರೈಲು ಅಪಘಾತಗಳನ್ನು ತಡೆಯಲು ಹೊಸ ವ್ಯವಸ್ಥೆಯೊಂದನ್ನು ರೂಪಿಸಲಾಗಿದ್ದು, ಇದಕ್ಕಾಗಿ ಟೆರೇನ್‌ ಇಮೇಜಿಂಗ್ ವಿಷನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ರೈಲು ಹಳಿಗಳ ಮೇಲೆ ನಡೆಯುವ ಪ್ರತಿಯೊಂದು ಘಟನಾವಳಿಗಳನ್ನು ಈ ಟೆರೇನ್ ಇಮೇಜಿಂಗ್ ವಿಷನ್ ತಂತ್ರಜ್ಞಾನ ದಾಖಲು ಮಾಡಿಕೊಳ್ಳಲಿದ್ದು, ಇದರಿಂದಾಗಿ ರೈಲು ಹಳಿಗಳ ಮೇಲೆ ನಡೆಯುವ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ.

ಇತ್ತೀಚಿನ ಎಂ ಸಿ ಆರ್ ಬಿ ಡೇಟಾ ಪ್ರಕಾರ 2014 ರಲ್ಲಿ ರೈಲು ಅಪಘಾತದಲ್ಲಿ ಸುಮಾರು 27,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಈ ಪೈಕಿ ಹೆಚ್ಚು ಜನರು ಚಲಿಸುತ್ತಿರುವ ರೈಲಿನಿಂದ ಹೊರಬಿದ್ದು ಅಥವಾ ರೈಲು ವ್ಯಕ್ತಿಯ ಮೇಲೆ ಹರಿದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರೈಲು ಹಳಿಗಳ ಮೇಲೆ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಂಡಿರುವ ರೈಲ್ವೆ ಇಲಾಖೆ, ತ್ರಿನೇತ್ರ ವ್ಯವಸ್ಥೆಯನ್ನು ಜಾರಿಗೆ ತರಲು ಶೀಘ್ರವೇ ಟೆಂಡರ್ ಕರೆಯಲಿದೆ.  ಈ ವ್ಯವಸ್ಥೆಯನ್ನು ರೈಲುಗಳಲ್ಲಿ ಅಳವಡಿಸಲು ಈಗಾಗಲೇ ಇಸ್ರೇಲ್ ಹಾಗೂ ಬ್ರಿಟನ್ ನ ಕಂಪನಿಗಳು ಉತ್ಸಾಹ ತೋರಿದ್ದು, ಒಂದು ಕಿಮಿ ದೂರದಿಂದಲ್ಲೆ ಹಳಿಯ ಮೇಲಿರುವ ವಸ್ತುಗಳನ್ನು ಗುರುತಿಸುವ ರೀತಿಯ ವ್ಯವಸ್ಥೆಯನ್ನು ರೂಪಿಸಿವೆ ಎಂದು ತಿಳಿದುಬಂದಿದೆ. ರಾಡಾರ್ ಹಾಗೂ ಲೇಸರ್ ನ ಟೆರೇನ್‌ ಇಮೇಜಿಂಗ್ ವಿಷನ್ ತಂತ್ರಜ್ಞಾನವನ್ನು ರೈಲ್ವೆ ಇಲಾಖೆಯಲ್ಲಿ ಬಳಕೆ ಮಾಡುವ ವ್ಯವಸ್ಥೆ ಜಾರಿಯಾಗಿದ್ದೆ ಆದಲ್ಲಿ ಈ ವಿನೂತನ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆ ಭಾರತದ್ದಾಗಿರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com