

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಸ್ಲಿಮರ ಓಲೈಕೆಗೆ ಮುಂದಾಗಿದೆ ಎಂದು ಶಿವಸೇನಾ ಕಿಡಿ ಕಾರಿದೆ. ಹಿಂದೂ ರಾಷ್ಟ್ರದ ತತ್ವ ಸಿದ್ಧಾಂತಗಳ ಮೇಲೆ ಸ್ಥಾಪಿತವಾಗಿರುವ ಆರ್ ಎಸ್ ಎಸ್ ಮುಸ್ಲಿಮರಿಗೆ ಇಪ್ತಾರ್ ಕೂಟ ಏರ್ಪಡಿಸಲು ಮುಂದಾಗಿರುವುದು ಆಶ್ಟರ್ಯ ತಂದಿದೆ ಎಂದು ಅದು ಹೇಳಿದೆ.
ಆರ್ ಎಸ್ ಎಸ್ ತನ್ನ ಇತಿಹಾಸ ಮತ್ತು ಪ್ರಮುಖ ಧ್ಯೇಯಗಳನ್ನು ಮರೆತು ಇದೀಗ ಇಫ್ತಾರ್ಕೂಟ ಏರ್ಪಡಿಸಲು ಮುಂದಾಗಿ ರುವುದು ದುರಂತ ಎಂದು ಶಿವನೇನಾ ಮುಖ್ಯಸ್ಥೆ ಮನಿಷಾ ಕಯಾಂಡೆ ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತಿತರ ಪಕ್ಷಗಳು ಇಫ್ತಾರ್ಕೂಟ ಏರ್ಪಡಿಸಿದಾಗ ಅದರ ವಿರುದ್ಧ ದನಿ ಎತ್ತಿ, ಹಿಂದು ರಾಷ್ಟ್ರವಾದಿಗಳಾಗಿದ್ದ ಆರ್ಎಸ್ಎಸ್ ಮುಖಂಡರು ಮುಸ್ಲಿಮರನ್ನು ಓಲೈಸಲು ನಿಲುವನ್ನು ಏಕೆ ಕೈಗೊಂಡರೊ ತಿಳಿಯದಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲ ವಿಚಾರಧಾರೆಗಳಿಂದ ಆರ್ಎಸ್ಎಸ್ ಹೊರ ಬಂದಿದೆ. ಹಲವು ವರ್ಷದಿಂದ ಪಾಳಿಸಿಕೊಂಡು ಬಂದಿದ್ದ ಸಿದ್ಧಾಂತದ ಬಗ್ಗೆ ಅನುಯಾಯಿಗಳಿಗೆ ಅನುಮಾನ ಹುಟ್ಟುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಸಂಸತ್ ಆವರಣದಲ್ಲಿ 140 ದೇಶಗಳ ರಾಯಭಾರಿಗಳನ್ನು ಆಹ್ವಾನಿಸಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಸೇನಾ ತೀವ್ರವಾಗಿ ಖಂಡಿಸುತ್ತದೆ ಎಂದವರು ಹೇಳಿದ್ದಾರೆ.