ಇನ್ಫೋಸಿಸ್ ಉದ್ಯೋಗಿ ಕೊಲೆ ಪ್ರಕರಣ: 16 ಪೊಲೀಸರ ವರ್ಗಾವಣೆ

ಇನ್ಫೋಸಿಸ್ ಮಹಿಳಾ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣ ಸಂಬಂಧ 16 ಮಂದಿ ಪೊಲೀಸರನ್ನ ತಮಿಳುನಾಡು ಸರ್ಕಾರ ವರ್ಗಾವಣೆ ಮಾಡಿದೆ.
ಕೊಲೆಯಾದ ಸ್ವಾತಿ
ಕೊಲೆಯಾದ ಸ್ವಾತಿ

ಚೆನ್ನೈ: ಇನ್ಫೋಸಿಸ್ ಮಹಿಳಾ ಟೆಕ್ಕಿ ಸ್ವಾತಿ ಹತ್ಯೆ ನಡೆದು 72 ಗಂಟೆ ಕಳೆದಿದ್ದರೂ ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿ ಕಾಣದಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ಪೊಲೀಸರನ್ನ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ 16 ಮಂದಿ ಪೊಲೀಸರನ್ನ ತಮಿಳುನಾಡು ಸರ್ಕಾರ ವರ್ಗಾವಣೆ ಮಾಡಿದೆ.

ಸಹಾಯಕ ಕಮಿಷನರ್ ರ್ಯಾಂಕ್ ನ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಸ್ವಾತಿ ಕೊಲೆ ಪ್ರಕರಣದ ತನಿಖೆಗಾಗಿ 25 ಪೊಲೀಸರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಪೂರ್ವ ವಲ್ಯದ ಜಂಟಿ ಆಯುಕ್ತ ಎಸ್, ಮನೋಹರ್ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಮಬ್ಬಾಗಿದ್ದು, ಮುಂದಿನ ದಿನಗಳಲ್ಲಿ ಸ್ವಾತಿ ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿಗಳನ್ನು ವಿಚಾರಣೆ ನಡೆಸಲಾಗುವುದು, ಇದರಿಂದ ಸಂಶಯಾಸ್ಪದ ವ್ಯಕ್ತಿಯನ್ನು ಗುರುತಿಸಲು ಸಹಾಯವಾಗುವುದು ಎಂದು ಅವರು ತಿಳಿಸಿದ್ದಾರೆ.

ಕೊಲೆಯ ನಂತರ ಆರೋಪಿ ಚೂಲೈಮಡು ಹೈ ರೋಡ್ ನಲ್ಲಿ ಸುಮಾರು 1 ಕಿಮೀ ವರೆಗೂ ನಡೆದುಕೊಂಡೇ ಹೋಗಿದ್ದಾನೆ ಎಂಬುದು ಸಿಸಿಟಿವಿಯಲ್ಲಿ ಕಂಡು ಬಂದಿದೆ.

ರೈಲ್ವೆ ಪೊಲೀಸರಿಂದ ಕೇಸನ್ನ ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತನಿಖೆಗೆ ರೈಲ್ವೆ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ಜನಸಂದಣಿಯಿಂದ ತುಂಬಿದ್ದ ಪ್ರಸಿದ್ಧ ನುಗಂಬಕ್ಕಮ್ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಟೆಕ್ಕಿ ಸ್ವಾತಿಗೆ ಇರಿದು ಕೊಂದಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com