ಬಿಜೆಪಿ ಆಡಳಿತವಿರುವ ರಾಜ್ಯಗಳು ಗ್ರಾಮೀಣ ಉದ್ಯೋಗ ನೀಡುವಲ್ಲಿ ವಿಫಲ: ಸಮೀಕ್ಷೆ

ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಸೇರಿದಂತೆ ಬಿಜೆಪಿ ಅಡಳಿತವಿರುವ ರಾಜ್ಯಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಸೇರಿದಂತೆ ಬಿಜೆಪಿ ಅಡಳಿತವಿರುವ ರಾಜ್ಯಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ವಿಫಲವಾಗಿವೆ. ಹಲವು ರಾಜ್ಯಗಳು ಶೇ.5 ರಷ್ಟು ಕುಟುಂಬಗಳಿಗೆ 100 ದಿನ ಕೆಲಸ ನೀಡುವಲ್ಲಿ ವಿಫಲವಾಗಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೇವಲ ಶೇ.10 ರಷ್ಟು ಕುಟುಂಬಗಳಿಗೆ ಉದ್ಯೋಗ ನೀಡಲು ಸಾಧ್ಯವಾಗಿಲ್ಲ, ಮಹಾರಾಷ್ಟ್ರ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತೀರಾ ಕಳಪೆ ಮಟ್ಟದಲ್ಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಬಿಜೆಪಿ ಆಡಳಿತರೂಢ ರಾಜ್ಯಗಳಾದ ಪಂಜಾಬ್(2), ಹರ್ಯಾಣ(2), ಗುಜಾರಾತ್(3), ಮತ್ತು ರಾಜಸ್ತಾನ(5)ಗಳಲ್ಲಿ ಶೇ.ವಾರು ಮಾತ್ರ ಯೋಜನೆ ಅನುಷ್ಠಾನವಾಗಿದೆ. ಇನ್ನೂ ಬಿಹಾರದಲ್ಲಿ ಶೇ.3.4, ಹಾಗೂ ಉತ್ತರ ಪ್ರದೇಶದಲ್ಲಿ 4.4 ರಷ್ಟು ಕುಟುಂಬಗಳಿಗೆ ಉದ್ಯೋಗ ದೊರೆತಿದೆ.

ಬೇಡಿಕೆಯ ಆಧಾರದ ಮೇಲೆ ಉದ್ಯೋಗ ಸೃಷ್ಠಿಯಾಗುತ್ತಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಬಿರೇಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಹಲವು ದಕ್ಷಿಣ ರಾಜ್ಯಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡುವ ಕೂಲಿಗಿಂತ ಹೆಚ್ಚು ವೇತನ ನೀಡುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಮಿಳು ನಾಡು ಶೇ. 14 ರಷ್ಟು  ಕುಟುಂಬಗಳಿಗೆ ಹಾಗೂ ಕೇರಳ ಶೇ.11 ರಷ್ಟು ಕುಟುಂಬಗಳಿಗೆ ಹಾಗೂ ಕರ್ನಾಟಕ ಶೇ.10ರಷ್ಟು, ಅಂಧ್ರ ಪ್ರದೇಶ ಶೇ.10, ತೆಲಂಗಾಣ ಶೇ.15 ರಷ್ಟು ಕುಟುಂಬಗಳಿಗೆ ನೂರು ದಿನಗಳ ಉದ್ಯೋಗ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com