ಮಾದರಿ ಕಾಯಿದೆಗೆ ಕೇಂದ್ರ ಅಸ್ತು, ಇನ್ನು ಮಾಲ್‌, ಚಿತ್ರ ಮಂದಿರಗಳು 24 x 7 ಓಪನ್‌

ಮಾದರಿ ಮಳಿಗೆ ಮತ್ತು ಸಂಸ್ಥೆ ಕಾಯಿದೆ 2016ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಇನ್ನು ಮುಂದೆ ಬ್ಯಾಂಕುಗಳು, ಮಳಿಗೆಗಳು, ಚಿಲ್ಲರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮಾದರಿ ಮಳಿಗೆ ಮತ್ತು ಸಂಸ್ಥೆ ಕಾಯಿದೆ 2016ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಇನ್ನು ಮುಂದೆ ಬ್ಯಾಂಕುಗಳು, ಮಳಿಗೆಗಳು, ಚಿಲ್ಲರೆ ವ್ಯಾಪಾರದ ಅಂಗಡಿಗಳು, ಮಾಲ್‌ಗ‌ಳು ಹಾಗೂ ಚಿತ್ರ ಮಂದಿರಗಳು ವಾರದ ಏಳು ದಿನವೂ, ದಿನದ 24 ಗಂಟೆಗಳ ಕಾಲವೂ ತೆರೆದುಕೊಂಡಿರಬಹುದಾಗಿದೆ.
ಈ ನೂತನ ಕಾಯಿದೆ ಉತ್ಪಾದನ ಘಟಕದ ಹೊರತಾಗಿಯೂ 10 ಹಾಗೂ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನಿಯೋಜಿಸಿಕೊಳ್ಳಲು ಮತ್ತು ವರ್ಷದ 365 ದಿನಗಳ ಕಾಲವೂ ತೆರೆದಿಡಲು ಮತ್ತು ತಮಗೆ ಇಷ್ಟ ಬಂದಾಗ ಬಂದ್ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಲ್ಲದೆ ಮಹಿಳೆಯರಿಗೆ ಸೂಕ್ತ ಭದ್ರತೆಯೊಂದಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಆದರೆ ಕುಡಿಯಲು ಉತ್ತಮ ನೀರು, ಕ್ಯಾಂಟೀನ್, ಕ್ರೀಚ್ ಹಾಗೂ ಪ್ರಥಮ ಚಿಕಿತ್ಸೆ ಸೇರಿದಂತೆ ಕೆಲಸ ನಿರ್ವಹಿಸಲು ಉತ್ತಮ ಪರಿಸ್ಥಿತಿ ಇರಬೇಕು ಎಂದು ಸೂಚಿಸಿದೆ.
ಮಾದರಿ ಕಾಯಿದೆಯಿಂದಾಗಿ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿನ್ನು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಏಕರೂಪದ ನೀತಿ - ನಿಮಯಗಳನ್ನು ಜಾರಿಗೆ ತರಬಹುದಾಗಿದೆ. ಈಗ ವಾಣಿಜ್ಯ ವ್ಯಾಪಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅವುಗಳನ್ನು ದಿನದ ಹೊತ್ತಿನಲ್ಲಿ ತೆರೆಯುವ, ಮುಚ್ಚುವ, ರಜೆ ಘೋಷಿಸುವ, ಕೆಲಸದ ಪಾಳಿಗಳನ್ನು ನಿಗದಿಸುವುದಕ್ಕೆ ಆಯಾ ರಾಜ್ಯಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ರಾಜ್ಯ ಸರಕಾರಗಳು ಈ ಬಗ್ಗೆ ತಮ್ಮದೇ ಆದ ಶಾಸನಗಳನ್ನು ಹೊಂದಿವೆ. ವಾಣಿಜ್ಯ ವ್ಯವಹಾರದ ಸಂಸ್ಥೆಗಳನ್ನು ದಿನದ ನಿರ್ದಿಷ್ಟ ಹೊತ್ತಿನಲ್ಲಿ ತೆರೆಯುವ ಮತ್ತು ಮುಚ್ಚವುದಕ್ಕೆ ಸಂಬಂಧಿಸಿದಂತೆ ಕ್ಲಿಷ್ಟಕರ ಕಾಯಿದೆಗಳು ಇರುವುದನ್ನು ಕೇಂದ್ರ ಸರಕಾರವು ಗಮಿನಿಸಿದೆ.
ಅಂತೆಯೇ ಈ ಎಲ್ಲ ವಿಷಯದಲ್ಲಿ ಏಕರೂಪತೆಯನ್ನು ತರುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಇಂದು ಮಾದರಿ ವಾಣಿಜ್ಯ ಮಳಿಗೆ ಮತ್ತು ಸಂಸ್ಥೆಗಳ ಕಾಯಿದೆಗೆ ಅನುಮೋದನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com