ಈದ್ ಹಬ್ಬದ ಪ್ರಯುಕ್ತ ಮೋದಿ ವೆಬ್ ಪೋರ್ಟಲ್ ನಲ್ಲಿ ಇ-ಗ್ರೀಟಿಂಗ್ಸ್ ಸ್ಪರ್ಧೆ

ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಆಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸಂವಹನ...
ಮೋದಿ ವೆಬ್ ಪೋರ್ಟಲ್
ಮೋದಿ ವೆಬ್ ಪೋರ್ಟಲ್
Updated on

ನವದೆಹಲಿ: ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಆಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸಂವಹನ ಪೋರ್ಟಲ್ ಆದ MyGov.in ನಲ್ಲಿ ಇ-ಗ್ರೀಟಿಂಗ್ಸ್ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

MyGov.in ಇ-ಗ್ರೀಟಿಂಗ್ಸ್ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ರಂಜಾನ್ ಹಬ್ಬವನ್ನು ಉತ್ಸಾಹದಿಂದ ಆಚರಿಸಲು ಬಯಸುತ್ತದೆ ಎಂದು ಪೋರ್ಟಲ್ ನಲ್ಲಿ ಬರೆಯಲಾಗಿದೆ.

ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರಿಗೆ ನಗದು ಬಹುಮಾನ ನೀಡಲಾಗುತ್ತದೆ.ಮೊದಲ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ 10 ಸಾವಿರ, 7,500 ಹಾಗೂ 5 ಸಾವಿರ ನೀಡಲಾಗುತ್ತದೆ.

ಜುಲೈ 4ರಿಂದ 20ರವರೆಗೆ ವೆಬ್ ಪೋರ್ಟಲ್ ನಲ್ಲಿ ಭಾಗವಹಿಸಿದವರ ವಿನ್ಯಾಸಗಳನ್ನು ಪ್ರಕಟಿಸಲಾಗುತ್ತದೆ. ಸ್ಥಾಯಿ ಸಮಿತಿ ಆಯ್ಕೆ ಮಾಡಲಿದೆ. ವಿನ್ಯಾಸ 10*12 ಸೆಂಟಿ ಮೀಟರ್ ಅಳತೆಯಲ್ಲಿರಬೇಕು. ಯಾವುದೇ ವಿನ್ಯಾಸವನ್ನು ನಕಲು ಮಾಡುವ ಹಾಗಿಲ್ಲ ಎಂಬ ನಿಯಮವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಜುಲೈ 3ರಂದು ಬೆಳಗ್ಗೆ 11 ಗಂಟೆಯೊಳಗೆ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬಹುದು.

ದೇಶಾದ್ಯಂತ ಈದ್ ಉಲ್ ಫಿತರ್ ನ್ನು ಜುಲೈ 6 ಮತ್ತು 7ರಂದು ಆಚರಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com