ಕೇರಳ ವಿಧಾನಸಭೆಯಲ್ಲಿ ಸರಿತಾರನ್ನು ವೇಶ್ಯೆ ಎಂದು ಜರಿದ ಶಾಸಕ

ಶಾಸಕರೊಬ್ಬರು ವಿಧಾನಸಭೆ ಅಧಿವೇಶನದಲ್ಲಿ ಮಹಿಳೆಯೊಬ್ಬರನ್ನು ವೇಶ್ಯೆ ಎಂದು ಜರಿದಿದ್ದು ಕೇರಳ ವಿಧಾನಸಭೆ ಇತಿಹಾಸದ...
ಸರಿತಾ ಎಸ್ ನಾಯರ್
ಸರಿತಾ ಎಸ್ ನಾಯರ್
ತಿರುವನಂತಪುರಂ: ಶಾಸಕರೊಬ್ಬರು ವಿಧಾನಸಭೆ ಅಧಿವೇಶನದಲ್ಲಿ ಮಹಿಳೆಯೊಬ್ಬರನ್ನು ವೇಶ್ಯೆ ಎಂದು ಜರಿದಿದ್ದು ಕೇರಳ ವಿಧಾನಸಭೆ ಇತಿಹಾಸದಲ್ಲೇ ಇದೇ ಮೊದಲು ಅಂತ ಕಾಣುತ್ತೆ. 
ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯ ವೇಳೆ ಸೋಲಾರ ಹಗರಣವನ್ನು ಪ್ರಸ್ತಾಪಿಸಿದ ಸಿಪಿಎಂ ಸ್ವತಂತ್ರ ಶಾಸಕ ಪಿ ವಿ ಅನ್ವರ್ ಅವರು, ಹಗರಣದ ಪ್ರಮುಖ ಆರೋಪಿ ಸರಿತಾ ಎಸ್ ನಾಯರ್ ಅವರು ಒಬ್ಬ ವೇಶ್ಯೆ ಎಂದು ಜರಿದರು.
ಈ ವೇಳೆ ಸದನದಲ್ಲಿ ಹಲವು ಸಚಿವರು, ಮಾಜಿ ಸಚಿವರು ಹಾಗೂ ಪ್ರತಿಪಕ್ಷದ ನಾಯಕ ಸೇರಿದಂತೆ ಹಲವು ಹಿರಿಯ ಸದಸ್ಯ ಉಪಸ್ಥಿತಿರಿದ್ದರು. ಆದರೆ ಅನ್ವರ್ ಅವರು ಓರ್ವ ಮಹಿಳೆ ವಿರುದ್ಧ ಅವಹೇಳನಾಕಾರಿ ಭಾಷೆ ಬಳಸಿದ್ದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸೋಲಾರ್ ಹಗರಣದ ಆರೋಪಿ ಸರಿತಾ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿತ್ತು. ಈ ಆರೋಪಗಳನ್ನು ಸರಿತಾ ಸ್ಪಷ್ಟವಾಗಿ ತಳ್ಳಿಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com