
ಫರೀದಾಬಾದ್: ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ರಿಜ್ವಾನ್ ಹಾಗೂ ಮುಖ್ತಿಯಾರ್ ಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ ತಿನ್ನಿಸಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗೋರಕ್ಷಾ ದಳದ ಕಾರ್ಯಕರ್ತರ ವಿರುದ್ಧ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೋರಕ್ಷಾ ದಳದ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದ ರಿಜ್ವಾನ್ ಹಾಗೂ ಮುಖ್ತಿಯಾರ್, ಮೇವಾಟ್ ನಿಂದ ದೆಹಲಿಗೆ 300 ಕೆಜಿಯಷ್ಟು ಗೋಮಾಂಸ ಸಾಗಿಸುತ್ತಿದ್ದರು, ಈ ವೇಳೆ ವಾಹನವನ್ನು ತಡೆದ ಗೋರಕ್ಷಾ ದಳದ ಕಾರ್ಯಕರತರು ಇಬ್ಬರಿಗೂ ಪಂಚಗವ್ಯ ತಿನ್ನಿಸಿರುವ ವಿಡಿಯೋ ವೈರಲ್ ಆಗಿದೆ. ಪಂಚಗವ್ಯ ತಿನ್ನಿಸುವುದರೊಂದಿಗೆ ಗೋಮಾತಾ ಕಿ ಜೈ ಹಾಗೂ ಜೈ ಶ್ರೀ ರಾಮ್ ಎಂಬ ಘೋಷಣೆಗಳನ್ನು ಕೂಗುವಂತೆ ಜ್ವಾನ್ ಹಾಗೂ ಮುಖ್ತಿಯಾರ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
Advertisement